ಚಿನ್ನಮ್ಮಗೆ ತಪ್ಪದ ಸಂಕಷ್ಟಗಳು – News Mirchi
We are updating the website...

ಚಿನ್ನಮ್ಮಗೆ ತಪ್ಪದ ಸಂಕಷ್ಟಗಳು

ಅಣ್ಣಾಡಿಎಂಕೆ ಪ್ರಧಾನ ಕಾರ್ಯದರ್ಶಿ ಆಗಬೇಕೆಂದು ಬಯಸುತ್ತಿರುವ ಜಯಲಲಿತಾ ಗೆಳತಿ ಶಶಿಕಲಾಗೆ ಕಾನೂನಿನ ಸಮಸ್ಯೆಗಳ ಕಾಡಲಿದೆ. ಶಶಿಕಲಾ ರವರನ್ನು ಕಾನೂನು ಪ್ರಕಾರ ಎದುರಿಸಲು ವಿರೋಧಿ ಬಣ ವೇದಿಕೆ ಸಿದ್ಧಗೊಳಿಸಿದೆ. ಇದೇ ತಿಂಗಳು 29ರಂದು ನಡೆಯಲಿರುವ ಪಕ್ಷದ ಸರ್ವಸದಸ್ಯ ಸಭೆಗೆ ಶಶಿಕಲಾ ಬೆಂಬಲಿಗರಿಗೆ ಮಾತ್ರ ಆಹ್ವಾನ ನೀಡಲಾಗುತ್ತಿದೆ. ಆಹ್ವಾನವಿಲ್ಲದಿದ್ದರೂ ಸಭೆಗೆ ಹಾಜರಾಗಿ ಆಕೆಯ ಆಯ್ಕೆಯನ್ನು ತಡೆಯುತ್ತೇವೆ, ವಿಫಲವಾದರೆ ಕಾನೂನು ಪ್ರಕಾರ ಅಂದುಕೊಂಡಿದ್ದನ್ನು ಸಾಧಿಸುತ್ತೇವೆ ಎಂದು ವಿರೋಧಿ ಬಣ ವಿಶ್ವಾಸ ವ್ಯಕ್ತಪಡಿಸುತ್ತಿದೆ.

ಪಕ್ಷದಲ್ಲಿ ಪ್ರಾಥಮಿಕ ಸದಸ್ಯತ್ವವೇ ಹೊಂದಿರದ ಶಶಿಕಲಾ ರವರನ್ನು ಪ್ರಧಾನ ಕಾರ್ಯದರ್ಶಿಯಾಗಿ ಅದು ಹೇಗೆ ಆಯ್ಕೆ ಮಾಡುತ್ತಾರೆ ಎಂದು ವಿರೋಧಿ ಬಣ ಪ್ರಶ್ನಿಸುತ್ತಿದೆ. ‘ಪಕ್ಷದ ನಿಯಮಗಳ ಪ್ರಕಾರ ಒಬ್ಬ ಸದಸ್ಯ ಮೇಲೆ ಕ್ರಮ ಕೈಗೊಂಡ ಮೇಲೆ ಐದು ವರ್ಷಗಳ ಕಾಲ ಅವರು ಚುನಾವಣೆಗಳಲ್ಲಿ ಸ್ಪರ್ಧಿಸಬಾರದು.

2011 ಡಿಸೆಂಬರ್ ನಲ್ಲಿ ಶಶಿಕಲಾ ರನ್ನು ಪ್ರಾಥಮಿಕ ಸದಸ್ಯತ್ವದಿಂದಲೇ ಕಿತ್ತುಹಾಕಲಾಗಿತ್ತು. 2012ರ ಮಾರ್ಚ್ ನಲ್ಲಿ ಪುನಃ ಜಯಲಲಿತಾ ಬಳಿಗೆ ಶಶಿಕಲಾ ವಾಪಸಾಗಿದ್ದರು. ಆದರೆ ಶಶಿಕಲಾಗೆ ಪಕ್ಷದ ಪ್ರಾಥಮಿಕ ಸದಸ್ಯತ್ವದ ಕಾರ್ಡ್ ಜಾರಿ ಮಾಡಿರಲಿಲ್ಲ. ಇವುಗಳನ್ನು ಗಣನೆಗೆ ತೆಗೆದುಕೊಂಡರೆ ಅದು ಕಾನೂನು ವಿರೋಧಿ ಕ್ರಮವಾಗುತ್ತದೆ. ಚುನಾವಣಾ ಆಯೋಗವನ್ನು ತೆರೆಗೆ ಸರಿಸಿ ಶಶಿಕಲಾ ಮಾತ್ರ ನಾಮಿನೇಷನ್ ಹಾಕುವಂತೆ ಪಕ್ಷದ ಹಿರಿಯರು ವರ್ತಿಸಿದರೆ ಚುನಾವಣಾ ಆಯೋಗದಲ್ಲಿ ಪಿಟೀಷನ್ ಹಾಕಲು ಸಿದ್ಧವಾಗಿದ್ದೇವೆ ಎಂದು ವಿರೋಧ ಬಣ ಹೇಳುತ್ತಿದೆ.

ಇನ್ನು ಜಯಲಲಿತಾರ ಅಣ್ಣನ ಮಗಳು ದೀಪಾ, ಶೀಘ್ರದಲ್ಲಿ ದೆಹಲಿಗೆ ಹೋಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡುತ್ತಾರೆ ಎನ್ನಲಾಗಿದೆ. ಶಶಿಕಲಾ ವಿರೋಧ ಬಣ ಪನ್ನೀರ್ ಸೆಲ್ವಂ ಅಥವಾ ದೀಪಾ ರವರನ್ನು ಪ್ರಧಾನ ಕಾರ್ಯದರ್ಶಿಯಾಗಿ ಮಾಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. ದೀಪ ಪೇರವೈ ಎನ್ನುವ ಸಂಸ್ಥೆಯನ್ನು ಸ್ಥಾಪಿಸಿ ಸದಸ್ಯತ್ವ ಅಭಿಯಾನ ಕೈಗೊಂಡಿದ್ದಾರೆ.

Contact for any Electrical Works across Bengaluru

Loading...

Leave a Reply

Your email address will not be published.

error: Content is protected !!