ಅಸಲಿ ಧರ್ಮಯುದ್ಧ ಈಗ ಆರಂಭ : ಪನ್ನೀರ್ |News Mirchi

ಅಸಲಿ ಧರ್ಮಯುದ್ಧ ಈಗ ಆರಂಭ : ಪನ್ನೀರ್

ಚೆನ್ನೈ: ಮುಖ್ಯಮಂತ್ರಿ ಪಳನಿಸ್ವಾಮಿ ಬಹುಮತ ಸಾಬೀತು ಸಂದರ್ಭದಲ್ಲಿ ತಮಿಳುನಾಡು ವಿಧಾನಸಭೆಯಲ್ಲಿ ನಾಟಕೀಯ ಪರಿಣಾಮಗಳ ನಡೆದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಮಾಧ್ಯಮಗಳೊಂದಿಗೆ ಮಾತನಾಡಿದರು. ಅರಾಜಕ ಶಕ್ತಿಗಳು ಈಗ ಗೆಲುವು ಸಾಧಿಸಿದರೂ ತಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಸ್ಪಷ್ಟಪಡಿಸಿದರು. ಧರ್ಮವನ್ನು, ನ್ಯಾಯವನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದರು. ಅಮ್ಮನ ಆಶಯಗಳಿಗೆ ವಿರುದ್ಧವಾಗಿ ವರ್ತಿಸುತ್ತಿದ್ದಾರೆ ಎಂದು ಪಳನಿಸ್ವಾಮಿ ಗುಂಪಿನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನ್ಯಾಯ ಕೇಳಿದರೆ ದಾಳಿ ನಡೆಸಿ, ಹಲ್ಲೆ ಮಾಡಿ ಬಲವಂತವಾಗಿ ಕಲಾಪದಿಂದ ಹೊರಗೆಸೆದಿದ್ದಾರೆ, ಮಾಫಿಯಾ ಕೃತ್ಯಗಳಂತೆಯೇ ಬಹುಮತ ಸಾಬೀತು ಪ್ರಕ್ರಿಯೆ ಮುಗಿಸಿದರು ಎಂದು ಆರೋಪಿಸಿದರು.

ಅಸಲಿ ಯುದ್ಧ ಈಗ ಆರಂಭವಾಗಿದೆ ಎಂದು ಪನ್ನೀರ್ ಗುಂಪು ಘೋಷಿಸಿದೆ. ಡಿಎಂಕೆ, ಕಾಂಗ್ರೆಸ್ ಮತ್ತಿತರ ಪ್ರತಿಪಕ್ಷ ಸದಸ್ಯರು ಇಲ್ಲದೆಯೇ ಮತದಾನ ನಡೆಸಿದ್ದು ಪ್ರಜಾಪ್ರಭುತ್ವ ವಿರೋಧಿ ಎಂದು ಪನ್ನೀರ್ ಬಳಗ ಆರೋಪಿಸಿದೆ. ಯುದ್ಧ ಈಗ ಆರಂಭವಾಗಿದ್ದು, ತಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಸ್ಪಷ್ಟಪಡಿಸಿದೆ.

ಮಧ್ಯಾಹ್ನ 3 ಗಂಟೆಗೆ ಮುಂದೂಡಲಾಗಿದ್ದ ಕಲಾಪ ಪುನಃ ಆರಂಭವಾದ ನಂತರ ವಿಧಾನಸಭೆಯಲ್ಲಿ ಸಿಎಂ ಪಳನಿಸ್ವಾಮಿ ವಿಶ್ವಾಸಮತ ಯಾಚನೆಯಲ್ಲಿ ಗೆಲುವು ಸಾಧಿಸಿದ್ದಾರೆಂದು ಸ್ಪೀಕರ್ ಪ್ರಕಟಿಸಿದರು. ಪಳನಿಗೆ ಬೆಂಬಲಿಸಿ 122 ಶಾಸಕರು, ವಿರುದ್ಧವಾಗಿ 11 ಮತಗಳು ಬಂದಿರುವುದಾಗಿ ಪ್ರಕಟಿಸಿದರು.

Loading...
loading...
error: Content is protected !!