ಭಾರತದ ಆರ್ಥಿಕತೆಯ ಅಭಿವೃದ್ಧಿ ಅದ್ಭುತ

ಭಾರತದ ಆರ್ಥಿಕ ವ್ಯವಸ್ಥೆ ಅಭಿವೃದ್ಧಿ ಸಾಧಿಸಿದ ರೀತಿ ಅದ್ಭುತ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಶಂಸಿಸಿದ್ದಾರೆ. ಆರ್ಥಿಕ ವ್ಯವಸ್ಥೆಯ ಬಾಗಿಲುಗಳನ್ನು ಮುಕ್ತವಾಗಿಸುವ ಮೂಲಕ ಅದಕ್ಕೆ ಸೂಕ್ತ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದೆ ಎಂದು ಹೇಳಿದರು.

ವಿಶಾಲವಾದ ದೇಶದಲ್ಲಿ ಜನರೊಂದಿಗೆ ಬೆರೆತು ಪ್ರಧಾನಿ ನರೇಂದ್ರ ಮೋದಿ ಯಶಸ್ವಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೊಗಳಿದರು. ಏಷ್ಯಾ ಫೆಸಿಫಿಕ್ ಆರ್ಥಿಕ ಸಹಕಾರ ಸಮ್ಮೇಳನ ಸಂದರ್ಭದಲ್ಲಿ ವಿಯೆಟ್ನಾಂ ನಲ್ಲಿ ಶುಕ್ರವಾರ ನಡೆದ ಸಿಇಒ ಗಳ ಸಮಾವೇಶದಲ್ಲಿ ಅವರು ಈ ಹೇಳಿಕೆಗಳನ್ನು ನೀಡಿದ್ದಾರೆ.

70 ವರ್ಷಗಳ ಹಿಂದೆ ಸ್ವತಂತ್ರಗೊಂಡ ಭಾರತ, 130 ಕೋಟಿ ಜನಸಂಖ್ಯೆಯೊಂದಿಗೆ ವಿಶ್ವದಲ್ಲಿಯೇ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾಗಿ ಪ್ರಕಾಶಿಸುತ್ತಿದೆ ಎಂದು ಟ್ರಂಪ್ ಹೇಳಿದರು. ಭಾರತ ತನ್ನ ಆರ್ಥಿಕ ವ್ಯವಸ್ಥೆಯ ದ್ವಾರಗಳನ್ನು ಮುಕ್ತವಾಗಿ ತೆರೆದಂದಿನಿಂದ ಅದು ವಿಶೇಷ ಅಭಿವೃದ್ಧಿಯನ್ನು ಸಾಧಿಸಿದೆ. ಹೆಚ್ಚಾಗುತ್ತಿರುವ ಮಧ್ಯಮವರ್ಗದ ಜನರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

Get Latest updates on WhatsApp. Send ‘Add Me’ to 8550851559