ಆಗ್ರಾ ರೈಲ್ವೇ ನಿಲ್ದಾಣದ ಬಳಿ ಅವಳಿ ಬಾಂಬ್ ಸ್ಪೋಟ |News Mirchi

ಆಗ್ರಾ ರೈಲ್ವೇ ನಿಲ್ದಾಣದ ಬಳಿ ಅವಳಿ ಬಾಂಬ್ ಸ್ಪೋಟ

ಉತ್ತರಪ್ರದೇಶದ ಆಗ್ರಾ ರೈಲ್ವೇ ನಿಲ್ದಾಣ ಸಮೀಪ ಶನಿವಾರ ಬೆಳಗ್ಗೆ ಅವಳ ಸ್ಪೋಟ ನಡೆದಿದೆ. ಮೊದಲು ರೈಲ್ವೇ ಹಳಿಯ ಸಮೀಪ ಕಸ ತುಂಬಿದ್ದ ಟ್ರಾಕ್ಟರ್ ಬಳಿ ಬಾಂಬ್ ಸ್ಪೋಟಗೊಂಡರೆ, ನಂತರ ಸಮೀಪದ ಮನೆಯ ಬಳಿ ಮತ್ತೊಂದು ಸ್ಪೋಟ ನಡೆದಿದೆ. ಈ ಸ್ಪೋಟಗಳಲ್ಲಿ ಬಳಸಿದ ಬಾಂಬುಗಳು ಕಡಿಮೆ ತೀವ್ರತೆಯನ್ನು ಹೊಂದಿದ್ದರಿಂದ ಹೆಚ್ಚು ಹಾನಿಯಾಗಿಲ್ಲ. ರೈಲ್ವೇ ಹಳಿ ಬಳಿ ಬೆದರಿಕೆ ಪತ್ರವೊಂದು ಸಿಕ್ಕಿದೆ.

ಮಾಹಿತಿ ಪಡೆದ ಪೊಲೀಸರು ಘಟನೆ ನಡೆದ ಸ್ಥಳಕ್ಕೆ ಆಗಮಿಸಿದ್ದು ತನಿಖೆ ನಡೆಸುತ್ತಿದ್ದಾರೆ. ಉತ್ತರಪ್ರದೇಶದಲ್ಲಿ ಬಿಜೆಪಿ ಗೆಲುವು, ಇತ್ತೀಚೆಗೆ ಲಕ್ನೋದಲ್ಲಿ ಐಸ್ ಉಗ್ರನ ಹತ್ಯೆ ಹಿನ್ನೆಲೆಯಲ್ಲಿ ಈ ಸ್ಪೋಟ ಆತಂಕ ಸೃಷ್ಟಿಸಿದೆ.

Loading...
loading...
error: Content is protected !!