ಕೋತಿಗಳಿಂತೆ ಮೆದುಳು ಬಳಸಿದರೆ ಆಗೋದು ಹೀಗೆ

ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಂ ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿ ಎಂದು ಸಾಬಿತಾದ ನಂತರ ಈ ಕುರಿತು ಬಾಲಿವುಡ್ ನಟಿ ಟ್ವಿಂಕಲ್ ಖನ್ನಾ ಪ್ರತಿಕ್ರಿಯಿಸಿದ್ದಾರೆ. ನಾವು ಕೋತಿಗಳಂತೆ ಮೆದುಳು ಉಪಯೋಗಿಸಿದರೆ ಹೀಗೇ ಆಗುತ್ತದೆ. ತುಂಬಾ ಬುದ್ದಿವಂತರೂ ಕೂಡಾ ತಮ್ಮನ್ನು ರಕ್ಷಿಸುತ್ತಾರೆಂದು ಗುರ್ಮೀತ್ ಬಳಿ ಹೋಗಿರುತ್ತಾರೆ. ಇಂತಹ ಘಟನೆಗಳು ತನ್ನನ್ನು ಕೆಲವೊಮ್ಮೆ ಆತಂಕಕ್ಕೆ ದೂಡುತ್ತವೆ ಎಂದು ಹೇಳಿದ್ದಾರೆ.

ಪಂಚಕುಲ ಸಿಬಿಐ ಕೋರ್ಟ್ ಗುರ್ಮೀತ್ ಸಿಂಗ್ ನನ್ನು ಇತ್ತೀಚೆಗೆ ತಪ್ಪಿತ್ತಸ್ಥ ಎಂದು ತೀರ್ಪು ನೀಡಿದ್ದು, ನಂತರ ಡೇರಾಗಳು ನಡೆಸಿದ ದಾಳಿಗಳಲ್ಲಿ 36 ಜನ ಸಾವನ್ನಪ್ಪಿದ್ದು ನನಗೆ ತೀವ್ರ ನೋವುಂಟು ಮಾಡಿದೆ ಎಂದು ಟ್ವಿಂಕಲ್ ಹೇಳಿದರು. ಜನರು ಹೆಚ್ಚು ನಂಬಿದಷ್ಟೂ ಬಾಬಾಗಳು ಒಳಿತಿಗಿಂತ ಕೆಡುಕೇ ಮಾಡುತ್ತಾ ಹೋಗುತ್ತಾರೆ. ಸೂರ್ಯನ ಕಡೆಗೆ ಸೂರ್ಯಕಾಂತಿ ಹೂವು ಹೇಗೆ ಮುಖ ಮಾಡಿ ನಿಂತಿರುತ್ತದೆಯೋ, ಹಾಗೆಯೇ ಜನರು ಕೆಟ್ಟ ಜನರ ಸುತ್ತಾ ಸುತ್ತುತ್ತಿರುತ್ತಾರೆ ಎಂದು ವ್ಯಂಗ್ಯ ಮಾಡಿದರು. ಇನ್ನಾದರೂ ಜನರಲ್ಲಿ ಬದಲಾವಣೆ ಬಂದರೆ ಕೆಟ್ಟ ಕೆಲಸಗಳನ್ನು ಮಾಡುವ ಕಳ್ಳ ಸ್ವಾಮೀಜಿಗಳನ್ನು ಬೇಗ ಗುರುತಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.