ತಾರೇಖ್ ಫತಾಗೆ ಜೀವ ಬೆದರಿಕೆ, ಬರ್ಕತಿ ಬಂಧನಕ್ಕೆ ಒತ್ತಾಯ

ಕೆನಡಾ ಮೂಲದ ಸಾಮಾಜಿಕ ಹೊರಾಟಗಾರ ಮತ್ತು ಲೇಖಕ ತಾರೇಖ್ ಫತಾ ರವರ ತಲೆ ಕಡಿಯುವಂತೆ ಹೇಳಿದ ಕೊಲ್ಕತಾದ ಟಿಪ್ಪು ಸುಲ್ತಾನ್ ಮಸೀದಿಯ ಶಾಹಿ ಇಮಾಮ್ ಸೈಯದ್ ನುರೂರ್ ಬರ್ಕತಿಯ ಬಂಧನಕ್ಕೆ ಸಾಮಾಜಿಕ ತಾಣಗಳಲ್ಲಿ ತೀವ್ರ ಒತ್ತಾಯಗಳು ಕೇಳಿ ಬರುತ್ತಿವೆ.

ಇದೇ ವ್ಯಕ್ತಿ ಮೊನ್ನೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಮುಖಕ್ಕೆ ಮಸಿ ಬಳಿದವರಿಗೆ 25 ಲಕ್ಷ ಬಹುಮಾನ ಘೋಷಿಸಿದ್ದನು. ಇದಕ್ಕೂ ಮೊದಲು ಈತ ಲೇಖಕಿ ತಸ್ಲಿಮಾ ನಸ್ರೀನ್ ತಲೆಗೆ ನಗದು ಬಹುಮಾನ ಘೋಷಿಸಿದ್ದ.

ಇತ್ತೀಚೆಗೆ ಇಮಾಮ್ ಬರ್ಕತಿ ಮತ್ತು ತಾರೇಖ್ ಫತಾ ಅವರಿಬ್ಬರೂ ಚಾನೆಲ್ ಒಂದರಲ್ಲಿ ಚರ್ಚೆಯೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಬರ್ಕತಿ ತಾರೇಖ್ ಅವರ ತಲೆ ಕಡಿಯುವ ಹೇಳಿಕೆ ನೀಡಿದ್ದ. ನಂತರ ಈ ವೀಡಿಯೊವನ್ನು ತಾರೇಖ್ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದರು.

ಜೀವ ಬೆದರಿಕೆ ಹಾಕಿಯೂ ಈ ವ್ಯಕ್ತಿ ಕೋಲ್ಕತಾ ಪೊಲೀಸರ ರಕ್ಷಣೆಯಲ್ಲಿ ಆರಾಮಾಗಿ ಓಡಾಡಿಕೊಂಡಿದ್ದಾರೆ ಎಂದು ತಾರೇಖ್ ಆರೋಪಿಸಿದ್ದಾರೆ.

ಈ ವಿವಾದಿತ ಇಮಾಮ್ ಬರ್ಕತಿ ಆಡಳಿತ ಪಕ್ಷ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥಡ ಮಮತಾ ಬ್ಯಾನರ್ಜಿಯವರಿಗೆ ಅತ್ಯಾಪ್ತರು ಎಂದು ಹೇಳಲಾಗುತ್ತಿದೆ.

Loading...

Leave a Reply

Your email address will not be published.

error: Content is protected !!