ಸಾಂದರ್ಭಿಕ ಚಿತ್ರ

ಸಂಬೂರಾ ಎನ್ಕೌಂಟರ್, ಹುತಾತ್ಮರಾದ ಇಬ್ಬರು ಯೋಧರು

ಗಡಿಯಲ್ಲಿ ಮತ್ತೊಮ್ಮೆ ಉಗ್ರರು ತಮ್ಮ ಪ್ರತಾಪ ತೋರಿದ್ದಾರೆ. ಪುಲ್ವಾಮಾ ಜಿಲ್ಲೆಯಲ್ಲಿನ ಸಂಬೂರಾ ಗ್ರಾಮದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಘಟನೆಯಲ್ಲಿ ಒಬ್ಬ ಉಗ್ರನೂ ಹತನಾಗಿದ್ದಾನೆ.

ಇಬ್ಬರು ಉಗ್ರರು ಅಡಗಿದ್ದಾರೆ ಎಂಬ ಪೊಲೀಸರು ನೀಡಿದ ಮಾಹಿತಿಯ ಹಿನ್ನೆಲೆಯಲ್ಲಿ ಗುರುವಾರ ಸಂಜೆ ಗ್ರಾಮಕ್ಕೆ ತೆರಳಿದ ಭದ್ರತಾ ಪಡೆಗಳು ಅವರಿಗಾಗಿ ಶೋಧಕಾರ್ಯ ನಡೆಸಿದವು. ಭದ್ರತಾಪಡೆಗಳನ್ನು ಗಮನಿಸಿದ ಉಗ್ರರು ಗುಂಡಿನ ದಾಳಿಗೆ ಇಳಿದರು. ಹೀಗಾಗಿ ಇಬ್ಬರು ಯೋಧರು ಗಂಭೀರವಾಗಿ ಗಾಯಗೊಂಡರು. ಪ್ರತಿ ದಾಳಿ ನಡೆಸಿದ ನಮ್ಮ ಸೈನಿಕರು ಒಬ್ಬ ಉಗ್ರನನ್ನು ಹತ್ಯೆ ಮಾಡಿದ್ದಾರೆ.

ಚಿಕಿತ್ಸೆ ಪಡೆಯುತ್ತಾ ಗಾಯಗೊಂಡಿದ್ದ ಯೋಧರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಪ್ರಕಟಿಸಿದ್ದಾರೆ. ಸತ್ತ ಉಗ್ರನನ್ನು ಜೈಷ್-ಇ-ಮೊಹಮದ್ ಸಂಘಟನೆ ಬಾಬರ್ ಎಂದು ಗುರುತಿಸಲಾಗಿದೆ. ಕತ್ತಲಿನಲ್ಲಿ ಮತ್ತಿಬ್ಬರು ಉಗ್ರರು ಪರಾರಿಯಾದರು ಎಂದು ಭಾವಿಸಿದ ಪೊಲೀಸರು, ಅವರಿಗಾಗಿ ಹುಡುಕಾಟ ನಡೆಸಿದರು. ಕೊನೆಗೂ ಅವರು ಸಿಗದ ಕಾರಣ ಕಾರ್ಯಚರಣೆಯನ್ನು ಮುಗಿಸಿದರು.

Get Latest updates on WhatsApp. Send ‘Add Me’ to 8550851559