ಸಿಸಿಬಿ ದಾಳಿ, 50 ಲಕ್ಷ ಮೌಲ್ಯದ ಹಳೆಯ ನೋಟು ವಶ |News Mirchi

ಸಿಸಿಬಿ ದಾಳಿ, 50 ಲಕ್ಷ ಮೌಲ್ಯದ ಹಳೆಯ ನೋಟು ವಶ

ಬೆಂಗಳೂರು: ರದ್ದುಗೊಂಡ ಹಳೆಯ 500 ಮತ್ತು 1000 ಮುಖಬೆಲೆಯ ನೋಟುಗಳ ವಿನಿಮಯ ದಂಧೆ ನಡೆಸುತ್ತಿದ್ದ ಇಬ್ವರು ವ್ಯಕ್ತಿಗಳನ್ನು ನಗರದ ಅಪರಾಧ ವಿಭಾಗದ(ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ. ಖಚಿತ ಮಾಹಿತಿ ಪಡೆದ ನಗರದ ಕ್ರೈಮ್ ಬ್ರಾಂಚ್ ಪೊಲೀಸರು, ಶಾಂತಿನಗರದ ಲ್ಯಾಂಗ್ ಫೋರ್ಡ್ ರಸ್ತೆಯ ಮನೆಯ ಮೇಲೆ ದಾಳಿ ನಡೆಸಿ ಇಬ್ಬರು ವ್ಯಕ್ತಿಗಳನ್ನು ಬಂಧಿಸಿ ಸುಮಾರು 50 ಲಕ್ಷ ಮೌಲ್ಯದ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ಇಬ್ಬರ ವಿರುದ್ಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಬಂಧಿತರಲ್ಲೊಬ್ಬರು ಆನಂದ್ ಜೈನ್ ಆಡುಗೋಡಿಯಲ್ಲಿ ಆಭರಣ ಮಳಿಗೆಯನ್ನು ಹೊಂದಿದ್ದು, ಮತ್ತೊಬ್ಬರು ವಿನಾಯಕ ಪ್ರಸಾದ್ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದಾರೆ. ಈ ದಂಧೆಯಲ್ಲಿ ಮತ್ತೊಬ್ಬ ಜ್ಯುವೆಲರಿ ಅಂಗಡಿ ಮಾಲೀಕ ವಿಜಯ್ ಕುಮಾರ್ ಮತ್ತು ರಿಯಕ್ ಎಸ್ಟೇಟ್ ಉದ್ಯಮಿ ಸಲಾಮ್ ಎಂಬುವವರೂ ಸಕ್ರಿಯರಾಗಿದ್ದರೆಂದು ತಿಳಿದುಬಂದಿದ್ದು, ಸದ್ಯ ಇವರಿಬ್ಬರೂ ತಲೆಮರೆಸಿಕೊಂಡಿದ್ದಾರೆ.

  • No items.

Loading...
loading...
error: Content is protected !!