ಮಾಸ್ತಿಗುಡಿ ಕ್ಲೈಮಾಕ್ಸ್‌ ದುರಂತ, ಇಬ್ಬರು ನಟರು ನೀರುಪಾಲು

ದುನಿಯಾ ವಿಜಿ ನಟನೆಯ ಮಾಸ್ತಿ ಗುಡಿ ಚಿತ್ರದ ಕ್ಲೈಮಾಕ್ಸ್ ದುರಂತ್ಯದಲ್ಲಿ ಅಂತ್ಯಗೊಂಡಿದೆ. ಚಿತ್ರೀಕರಣ ನಡೆಯುತ್ತಿದ್ದಾಗ ಸುಮಾರು 2:30 ರ ಸುಮಾರಿನಲ್ಲಿ ಹೆಲಿಕಾಪ್ಟರ್ ನಿಂದ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಧುಮುಕಿದ ಅನಿಲ್ ಮತ್ತು ಉದಯ್ ಎಂಬ ಕಲಾವಿದರು ಈಜು ಬಾರದೆ ನೀರಿನಲ್ಲಿ ಮುಳುಗಿ ಅಸುನೀಗಿದ್ದಾರೆ. ಇಬ್ಬರಿಗೂ ಈಜು ಬರುತ್ತಿರಲಿಲ್ಲ ಎನ್ನಲಾಗಿದೆ.

ದುನಿಯಾ ವಿಜಯ್ ಜೊತೆ ನೀರಿಗೆ ಧುಮುಕಿದ ನಂತರ ತೆಪ್ಪದ ಮೂಲಕ ಅವರನ್ನು ದಡ ಸೇರಿಸುವುದಾಗಿ ಮೊದಲೇ ಹೇಳಲಾಗಿತ್ತು. ಅದರೆ ಸಮಯಕ್ಕೆ ಸರಿಯಾಗಿ ಅಲ್ಲಿಗೆ ತೆಪ್ಪ ಬಾರದ ಕಾರಣ ಸಾವನ್ನಪ್ಪಿದ್ದಾರೆ. ನಟ ದುನಿಯಾ ವಿಜಯ್ ಅಪಾಯದಿಂದ ಪಾರಾಗಿದ್ದಾರೆ. ಮೃತದೇಹಗಳಿಗಾಗಿ ಹುಡುಕಾಟ ನಡೆಸಿದ್ದು ನಟ ದುನಿಯಾ ವಿಜಯ್ ಅವರೂ ಸಹ ಮೃತದೇಹಗಳ ಪತ್ತೆಗೆ ಈಜು ತಜ್ಞರ ಜೊತೆ ತೆರಳಿದ್ದಾರೆ. ಇದುವರೆಗೂ ಮೃತದೇಹಗಳು ಪತ್ತೆಯಾಗಿಲ್ಲ. ನಾಗಶೇಖರ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ಚಿತ್ರ ಮಾಸ್ತಿಗುಡಿ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದ್ದು ಕ್ಲೈಮಾಕ್ಸ್ ಹಂತದ ಚಿತ್ರೀಕರಣ ಬಾಕಿ ಇತ್ತು.

fb_img_1478519447669ಸೂಕ್ತ ಭದ್ರತೆ ಕೈಗೊಳ್ಳದೆ ನಿರ್ಲಕ್ಷ್ಯವಹಿಸಿದ ಆರೋಪದ ಮೇಲೆ ಮಾಸ್ತಿಗುಡಿ ಚಿತ್ರತಂಡದ ವಿರುದ್ದ ಸ್ವಯಂ ಪ್ರೇರಿತ ಕ್ರಿಮಿನಲ್ ದೂರು ದಾಖಲಿಸಲಾಗುವುದು ಎಂದು ರಾಮನಗರ ಎಸ್ಪಿ ಹೇಳಿದ್ದಾರೆ.