ಎರಡು ನಾಯಿಗಳ ಸ್ನೇಹ ನೋಡಿ |News Mirchi

ಎರಡು ನಾಯಿಗಳ ಸ್ನೇಹ ನೋಡಿ

ಸ್ನೇಹಿತರಿಗಾಗಿ ತ್ಯಾಗ, ಸಹಾಯ ಮನೋಭಾವ, ಸ್ನೆಹಿತರ ಕಷ್ಟಕ್ಕಾಗಿ ಮರುಗುವುದು ಕೇವಲ ಮನುಷ್ಯರು ಮಾತ್ರವಲ್ಲ, ಪ್ರಾಣಿಗಳೂ ಮಾಡಬಲ್ಲುವು ಎಂಬುದನ್ನು ಇಲ್ಲೊಂದು ನಾಯಿ ಸಾಬೀತುಪಡಿಸಿದೆ. ಈ ಚಿತ್ರದಲ್ಲಿ ಕಾಣುವ ಒಂದೇ ತಳಿಯ ಎರಡು ನಾಯಿಗಳು ಸ್ನೇಹಿತರು.

ರೈಲು ಹಳಿಗಳ ಮೇಲೆ ಗಾಯಗೊಂಡು ಬಿದ್ದಿತ್ತೊಂದು ಹೆಣ್ಣು ನಾಯಿ. ಇದನ್ನು ಗಮನಿಸಿದ ಮತ್ತೊಂದು ಗಂಡು ನಾಯಿ ಗಾಯಗೊಂಡ ನಾಯಿಯನ್ನು ರಕ್ಷಿಸಲು ಮುಂದಾಯಿತು. ಅರೆ ಪ್ರಜ್ಣೆಯಿಂದ ಮೇಲೇಳಲಾರದ ಸ್ಥಿತಿಯಲ್ಲಿ ಬಿದ್ದಿದ್ದ ನಾಯಿಗೆ ಎರಡು ದಿನಗಳ ಕಾಲ ದಟ್ಟ ಮಂಜಿನ ನಡುವೆ ಅಲ್ಲೇ ಕಾವಲು ಕಾದಿತ್ತು.

  • No items.

ಆ ಮಾರ್ಗವಾಗಿ ರೈಲುಗಳು ಸಂಚರಿಸುತ್ತಿದ್ದರೂ ಎರಡೂ ನಾಯಿಗಳ ಅಸಹಾಯಕ ಸ್ಥಿತಿಯಲ್ಲಿ ಅಲ್ಲಿಂದ ಕದಲಲಿಲ್ಲ. ಇದನ್ನು ಗಮನಿಸಿದ ಸ್ಥಳೀಯರು, ಗಾಯಗೊಂಡ ನಾಯಿಯನ್ನು ರಕ್ಷಿಸಿದರು. ಇದನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದ ವ್ಯಕ್ತಿಯೊಬ್ಬ ಸಾಮಾಜಿಕ ತಾಣಗಳಲ್ಲಿ ಪೊಸ್ಟ್ ಮಾಡಿದ್ದು, ವೀಡಿಯೋ ವೈರಲ್ ಆಗಿದೆ.

Loading...
loading...
error: Content is protected !!