ಕುಲ್ಗಾಮ್ ಎನ್ಕೌಂಟರ್: ಇಬ್ಬರು ಉಗ್ರರ ಹತ್ಯೆ, ಒಬ್ಬನ ಸೆರೆ – News Mirchi

ಕುಲ್ಗಾಮ್ ಎನ್ಕೌಂಟರ್: ಇಬ್ಬರು ಉಗ್ರರ ಹತ್ಯೆ, ಒಬ್ಬನ ಸೆರೆ

ಜಮ್ಮೂ ಕಾಶ್ಮೀರ ಗಡಿಯಲ್ಲಿ ಭದ್ರತಾ ಪಡೆಗಳು ಮತ್ತೊಮ್ಮೆ ಉಗ್ರರ ಸಂಚು ವಿಫಲಗೊಳಿಸಿವೆ. ಕುಲ್ಗಾಮ್ ಜಿಲ್ಲೆಯಲ್ಲಿ ನಡೆದ ಎನ್ಕೌಂಟರಿನಲ್ಲಿ ಇಬ್ಬರು ಹಿಜ್ಬುಲ್ ಉಗ್ರರನ್ನು ಹತ್ಯೆ ಮಾಡಿದ ಭದ್ರತಾ ಪಡೆಗಳು, ಮತ್ತೊಬ್ಬ ಉಗ್ರನನ್ನು ವಶಕ್ಕೆ ಪಡೆದಿವೆ.

ಕುಲ್ಗಾಂ ಜಿಲ್ಲೆಯಲ್ಲಿನ ಕುದ್ವಾನಿ ಪ್ರದೇಶದಲ್ಲಿ ಉಗ್ರರು ಅಡಗಿದ್ದಾರೆ ಎಂಬ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಶೋಧ ಕಾರ್ಯಚರಣೆ ಕೈಗೊಂಡಿದ್ದವು. ಈ ಸಂದರ್ಭದಲ್ಲಿ ಇಂದು ಬೆಳಗಿನ ಜಾವ 3 ಗಂಟೆಯಲ್ಲಿ ಭದ್ರತಾ ಪಡೆಗಳ ಮೇಲೆ ಉಗ್ರರು ಗುಂಡಿನ ದಾಳಿ ಆರಂಭಿಸಿದರು. ಪ್ರತಿ ದಾಳಿ ನಡೆಸಿದ ಸೇನೆ ಇಬ್ಬರು ಉಗ್ರರನ್ನು ಹತ್ಯೆ ಮಾಡಿದೆ. ಮೃತರು ಹಿಜ್ಬುಲ್ ಮುಜಾಹಿದೀನ್ ಗೆ ಸೇರಿದ ದಾವೂದ್ ಅಹ್ಮದ್ ಅಲಿ ಮತ್ತು ಶಯ್ಯಾರ್ ವಾನಿ ಎಂದು ಹೇಳಲಾಗಿದ್ದು.

ಸೆರೆ ಸಿಕ್ಕ ಅರೀಫ್ ಸೋಫಿ ಎಂಬಾತ ಉಗ್ರರಿಗಾಗಿ ಭೂಗತವಾಗಿ ಕೆಲಸ ಮಾಡುತ್ತಿದ್ದವನು ಎನ್ನಲಾಗಿದೆ. ಉಗ್ರರಿಂದ ಒಂದು ಎಕೆ-47 ರೈಫಲ್, ಒಂದು ಇನ್ಸಾನ್ ರೈಫಲ್ ವಶಪಡಿಸಿಕೊಳ್ಳಲಾಗಿದೆ.

Get Latest updates on WhatsApp. Send ‘Add Me’ to 8550851559

Loading...