ಇಬ್ಬರು ಯುವರಾಜರು ಒಂದಾಗಿದ್ದಾರೆ, ಒಬ್ಬರು ದೇಶ ಲೂಟಿ ಮಾಡಿದರು… : ಅಮಿತ್ ಷಾ

ಉತ್ತರಪ್ರದೇಶ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿರುವ ರಾಹುಲ್ ಗಾಂಧಿ ಮತ್ತು ಅಖಿಲೇಶ್ ಯಾದವ್ ರವರ ಉದ್ದೇಶವನ್ನು ಪ್ರಶ್ನಿಸಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ, “ಇಬ್ಬರು ಯುವರಾಜರು ಒಂದಾಗಿದ್ದಾರೆ, ಒಬ್ಬರು ದೇಶವನ್ನು ಲೂಟಿ ಮಾಡಿದರೆ, ಮತ್ತೊಬ್ಬರು ರಾಜ್ಯವನ್ನು ಕೊಳ್ಳೆ ಹೊಡೆದಿದ್ದಾರೆ” ಎಂದು ವ್ಯಂಗ್ಯವಾಡಿದ್ದಾರೆ.

ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಇಲ್ಲ, ಲಾ ಅಂಡ್ ಆರ್ಡರ್ ಎಂದರೆ ಹಣ ಪಡೆದು ಆರ್ಡರ್ ಮಾಡು ಎಂಬ ಪರಿಸ್ಥಿತಿ ಇದೆ ಎಂದು ಆರೋಪಿಸಿದರು. ಬಡವರ ಭೂಮಿಯನ್ನು ಪ್ರಭಾವಶಾಲಿಗಳು ಒತ್ತುವರಿ ಮಾಡಿಕೊಂಡಿದ್ದು, ಬಿಜೆಪಿ ಅಧಿಕಾರಕ್ಕೆ ಬಂದರೆ 15 ದಿನಗಳಲ್ಲಿ ಬಡವರ ಭೂಮಿಯನ್ನು ಹಿಂದಿರುಗಿಸುತ್ತೇವೆ ಎಂದು ಭರವಸೆ ನೀಡಿದರು.

ರಾಜ್ಯದಲ್ಲಿ ಕೊಲೆಗಳು ಸಾಮಾನ್ಯ ಘಟನೆಗಳಾಗಿವೆ, ಅಖಿಲೇಶ್ ಯಾದವ್ ಆಡಳಿತದಲ್ಲಿ ಭಯ ಮತ್ತು ಭಯೋತ್ಪಾದನೆಯ ವಾತಾವರಣ ನಿರ್ಮಾಣವಾಗಿದೆ ಎಂದು ಆರೋಪಿಸಿದ ಅಮಿತ್ ಷಾ, ಬಿಜೆಪಿ ಅಧಿಕಾರಕ್ಕೆ ಬಂದರೆ ಕಾನೂನು ಸುವ್ಯವಸ್ಥೆಯನ್ನು ಪುನರ್ಸ್ಥಾಪಿಸುತ್ತೇವೆ ಎಂದರು.

Loading...

Leave a Reply

Your email address will not be published.

error: Content is protected !!