ಆಹಾರ ನೀಡಲು ಹೋದ ವ್ಯಕ್ತಿಯೇ ಬಿಳಿ ಹುಲಿ ದಾಳಿಗೆ ಬಲಿ – News Mirchi

ಆಹಾರ ನೀಡಲು ಹೋದ ವ್ಯಕ್ತಿಯೇ ಬಿಳಿ ಹುಲಿ ದಾಳಿಗೆ ಬಲಿ

ಆಹಾರ ನೀಡಲು ಹೋದ ಗೇಟ್ ಕೀಪರ್ ನನ್ನೇ ಹುಲಿಗಳು ಕೊಂದ ಘಟನೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ಶನಿವಾರ ನಡೆದಿದೆ. ಗುತ್ತಿಗೆ ನೌಕರನಾದ ಆಂಜನೇಯ(40) ಹುಲಿಗಳಿಗೆ ಮಾಂಸ ನೀಡಲು ಅವುಗಳ ಬಳಿಗೆ ಹೋದಾಗ ಎರಡು ಬಿಳಿ ಹುಲಿಗಳು ಆತನ ಮೇಲೆರಗಿ ಕೊಂದಿವೆ ಎಂದು ಅರಣ್ಯಾಧಿಕಾರಿ ಸಿ.ಜಯರಾಮ್ ಹೇಳಿದ್ದಾರೆ. ಶನಿವಾರ ಸಂಜೆ ಸುಮಾರು 5:45 ರಲ್ಲಿ ಈ ದುರ್ಘಟನೆ ನಡೆದಿದೆ.

ಮೃತ ವ್ಯಕ್ತಿ ಆಂಜನೇಯ ಈ ಹಿಂದೆ ಬೇರೆ ಕಡೆ ಕರ್ತವ್ಯ ನಿರ್ವಹಿಸುತ್ತಿದ್ದರು. ಅಕ್ಟೋಬರ್ 1 ರಂದು ಆತನನ್ನು ಹುಲಿಧಾಮದಲ್ಲಿ ನೇಮಕ ಮಾಡಲಾಗಿತ್ತು. ಇಲ್ಲಿ ಕೆಲಸ ಮಾಡಲು ಆತನಿಗೆ ಸೂಕ್ತ ಅನುಭವವೂ ಇರಲಿಲ್ಲ ಎನ್ನಲಾಗಿದೆ. ಹುಲಿಗಳು ಬೋನಿನೊಳಗೆ ಹೋಗಿವೆ ಎಂದು ಭಾವಿಸಿದ ಈತ ಹೊರಗೆ ಆಹಾರ ಇಡಲು ಹೋಗಿದ್ದರು. ಆದರೆ ಹೊರಗೇ ಇದ್ದ ಎರಡು ಹುಲಿ ಮರಿಗಳು ಈತನ ಮೇಲೆ ದಾಳಿ ನಡೆಸಿವೆ. ತೀವ್ರ ರಕ್ತಸ್ರಾವದಿಂದ ಆಂಜನೇಯ ಅವರು ಮೃತಪಟ್ಟಿದ್ದಾರೆ. [ಇದನ್ನೂ ಓದಿ: ಹಜ್ ಸಬ್ಸಿಡಿ ಕ್ರಮೇಣ ರದ್ದು, ಬಡವರಿಗೆ ಹೊರೆಯಾಗದಂತೆ ಕ್ರಮಕ್ಕೆ ಶಿಫಾರಸು]

 

Get Latest updates on WhatsApp. Send ‘Add Me’ to 8550851559

Loading...