ಚಿನ್ನಕ್ಕೆ ಬಣ್ಣ ಬಳಿದು ಕಳ್ಳಸಾಗಣೆ, ಇಬ್ಬರ ಬಂಧನ – News Mirchi

ಚಿನ್ನಕ್ಕೆ ಬಣ್ಣ ಬಳಿದು ಕಳ್ಳಸಾಗಣೆ, ಇಬ್ಬರ ಬಂಧನ

ನವದೆಹಲಿ: ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚಿನ್ನವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಇಬ್ಬರು ಮಹಿಳೆಯರನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ವೈರುಗಳಂತೆ ಕಾಣಿಸುವಂತೆ ಚಿನ್ನಕ್ಕೆ ಬಿಳಿ ಬಣ್ಣ ಬಳಿದು ಕಳ್ಳಸಾಗಣೆ ಮಾಡಲು ಹರಿಯಾಣ ಮೂಲದ ಬಂಧಿತರು ಪ್ರಯತ್ನಿಸಿದ್ದರು.

ಕಸ್ಟಮ್ಸ್ ಅಧಿಕಾರಿಗಳು ನಡೆಸಿದ ತನಿಖೆಯಲ್ಲಿ ಮಹಿಳೆಯ ಬಳಿ 27 ಲಕ್ಷ ಮೌಲ್ಯದ ಸುಮಾರು ಒಂದು ಕೆಜಿ ತೂಕದ ಚಿನ್ನವನ್ನು ಗುರುತಿಸಿ ಸ್ವಾಧೀನ ಪಡಿಸಿಕೊಂಡಿದ್ದಾರೆ. ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Loading...

Leave a Reply

Your email address will not be published.