ಉದಯ್ ಮೃತ ದೇಹ ಪತ್ತೆ: ಸ್ಥಳಕ್ಕಾಗಮಿಸಿದ ಶಿವಣ್ಣ, ಪರಮೇಶ್ವರ್, ಮುನಿರತ್ನ

ಬೆಂಗಳೂರು: ಚಿತ್ರೀಕರಣ ವೇಳೆ ನೀರು ಪಾಲಾಗಿದ್ದ ಕನ್ನಡ ಚಿತ್ರ ನಟರಲ್ಲಿ ಒಬ್ಬರಾದ ಉದಯ್ ಅವರ ಶವ ಇಂದು ಪತ್ತೆಯಾಗಿದೆ. ಮಾಹಿತಿ ತಿಳಿದ ನಂತರ ನಟ ಶಿವರಾಜ್ ಕುಮಾರ್, ಗೃಹ ಸಚಿವ ಪರಮೇಶ್ವರ್, ನಿರ್ಮಾಪಕ ಮುನಿರತ್ನ ಮುಂತಾದವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಮಾತನಾಡಿದ ನಟ ದುನಿಯಾ ವಿಜಯ್, ಅನಿಲ್ ಮೃತದೇಹ ಸಿಕ್ಕ ನಂತರ ಇಬ್ಬರು ನಟರ ಅಂತಿಮ ಸಂಸ್ಕಾರ ಮಾಡುವುದೋ ಅಥವಾ ಅಲ್ಲಿಯವರೆಗೂ ಕಾಯದೆ ಉದಯ್ ಅವರ ಅಂತಿಮ ಸಂಸ್ಕಾರ ನಡೆಸುವುದೋ ಎಂಬ ಬಗ್ಗೆ ಉದಯ್ ಕುಟುಂಬದವರ ಜೊತೆ ಮಾತನಾಡುತ್ತೇವೆ ಎಂದರು.

ಮೂರು ದಿನಗಳ ಹಿಂದೆ ಮಾಸ್ತಿಗುಡಿ ಚಿತ್ರದ ಕ್ಲೈಮಾಕ್ಸ್ ಚಿತ್ರೀಕರಣ ವೇಳೆ ಹೆಲಿಕಾಪ್ಟರ್ ನಿಂದ ಜಲಾಶಯದ ನೀರಿಗೆ ಹಾರಿದ್ದ ಇಬ್ಬರು ಸಾಹಸ ಕಲಾವಿದರು ಈಜು ಬಾರದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು.

Loading...

Leave a Reply

Your email address will not be published.

error: Content is protected !!