ಶ್ರೀಕೃಷ್ಣ ಮಠದಲ್ಲಿ ಮುಸ್ಲಿಮರಿಗೆ ಇಫ್ತಾರ್ ಕೂಟ – News Mirchi

ಶ್ರೀಕೃಷ್ಣ ಮಠದಲ್ಲಿ ಮುಸ್ಲಿಮರಿಗೆ ಇಫ್ತಾರ್ ಕೂಟ

ವಿಶ್ವಪ್ರಸಿದ್ಧಿಯಾಗಿರುವ ಹಿಂದೂಗಳ ಧಾರ್ಮಿಕ ಕೇಂದ್ರ ಉಡುಪಿ ಶ್ರೀಕೃಷ್ಣ ಮಠದಲ್ಲಿ ಇದೇ ಮೊದಲ ಬಾರಿಗೆ ಮುಸ್ಲಿಂ ಬಾಂಧವರಿಗೆ ಇಫ್ತಾರ್ ಕೂಟವನ್ನು ಏರ್ಪಡಿಸಲಾಗಿತ್ತು. ಹಲವು ಐತಿಹಾಸಿಕ ಬದಲಾವಣೆಗೆ ಮುನ್ನುಡಿ ಬರೆದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಗಳು, ಈ ಬಾರಿ ಅನ್ನಬ್ರಹ್ಮ ಹಾಲ್ ನಲ್ಲಿ ಇಫ್ತಾರ್ ಆಯೋಜಿಸಿದ್ದರು. ಇಫ್ತಾರ್ ಕೂಟದಲ್ಲಿ ಫಲಾಹಾರ ಮನತ್ತು ಉಪಹಾರಗಳನ್ನು ಸೇವಿಸಿದ ಮುಸ್ಲಿಮರು ಉಪವಾಸ ತ್ಯಜಿಸಿದರು. ಉಪವಾಸ ವಿರಮಿಸಿದ ನಂತರ ಮಠದಲ್ಲೇ ಅಂಜುಮಾನ್ ಮಸೀದಿಯ ಇಮಾಮ್ ಇನಾಯತುಲ್ಲಾ ನೇತೃತ್ವದಲ್ಲಿ ನಮಾಜ್ ನಡೆಸಲಾಯಿತು.

800 ವರ್ಷಗಳ ಇತಿಹಾಸದ, ಮಧ್ವಾಚಾರ್ಯರು ಸ್ಥಾಪಿಸಿದ ಶ್ರೀಕೃಷ್ಣ ಮಠದಲ್ಲಿ ಇದೇ ಮೊದಲ ಬಾರಿಗೆ ಪವಿತ್ರ ರಂಜಾನ್ ಪ್ರಯುಕ್ತ ಉಪವಾಸ ಆಚರಿಸುತ್ತಿದ್ದ ಮುಸ್ಲಿಮರಿಗೆ ಇಫ್ತಾರ್ ಕೂಟ ಆಯೋಜಿಸಿ, ಶ್ರೀಕೃಷ್ಣ ಮಠ ಹಿಂದೂ ಮುಸ್ಲಿಮರ ಸೌಹಾರ್ಧ ಸಂಬಂಧಕ್ಕೆ ಸಾಕ್ಷಿಯಾಗಿದೆ. ಈ ಮೂಲಕ ಸಮಾಜಕ್ಕೆ ಒಂದೊಳ್ಳೆ ಸಂದೇಶ ನೀಡಿದೆ.

 

Loading...