Big Breaking News

ಆಧಾರ್ ಜೆರಾಕ್ಸ್ ಪ್ರತಿ ನೀಡುವಾಗ ಎಚ್ಚರವಹಿಸಿ

ಕಾರ್ಡ್ ಜೆರಾಕ್ಸ್ ಪ್ರತಿ ನೀಡುವಾಗ ಎಚ್ಚರವಹಿಸಿ ಎಂದು ಭಾರತ ವಿಶಿಷ್ಟ ಪ್ರಾಧಿಕಾರ(ಯುಐಡಿಎಐ) ಎಚ್ಚರಿಸಿದೆ. ಯಾವ ಉದ್ದೇಶಕ್ಕೆ ನಕಲು ಪ್ರತಿ ನೀಡುತ್ತಿದ್ದೀರೋ ಅದರ ಮೇಲೆ ಸ್ಪಷ್ಟವಾಗಿ ಬರೆಯಿರಿ, ನಿಮ್ಮ ಸಂಖ್ಯೆ ದುರುಪಯೋಗ ಆಗದಂತೆ ತಡೆಯಿರಿ ಎಂದು ಹೇಳಿದೆ.

Download Free

ಹಿನ್ನೆಲೆಯಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಜಾರ್ಡ್ ಜೆರಾಕ್ಸ್ ಪ್ರತಿಗಳನ್ನು ನೀಡುತ್ತಿರುವುದರಿಂದ ಪ್ರಾಧಿಕಾರವು ಈ ಸಲಹೆ ನೀಡಿದೆ. ತಾವು ಯಾವ ಕಾರಣಕ್ಕೆ ನಕಲು ನೀಡುತ್ತಿದ್ದೇವೆ, ಯಾವ ಸಮಯ, ದಿನಾಂಕ ಎಂದು ಬರೆದು ಹಾಕಬೇಕು. ಜೆರಾಕ್ಸ್ ಪ್ರತಿ ನೀಡುವ ಸಂದರ್ಭಗಳಲ್ಲಿ ಇದನ್ನು ಪಾಲಿಸುವುದು ಉತ್ತಮ ಅಭ್ಯಾಸ ಎಂದು ಯುಐಎಡಿಐ ಸಿಇಒ ಅಜಯ್ ಭೂಷಣ್ ಪಾಂಡೆ ಹೇಳಿದ್ದಾರೆ.

ಆಧಾರ್ ಕುರಿತು ಯಾವುದೇ ಮಾಹಿತಿ ಬೇಕಿದ್ದರೂ ತಿಳಿಯಲು ಅನುಕೂಲವಾಗುವಂತೆ ಯುಐಡಿಎಐ ಉಚಿತ ಸಹಾಯವಾಣಿ ಸಂಖ್ಯೆ 1947 ನ್ನು ನವೀಕರಿಸಿದೆ. ಇದರ ಸೇವೆ ಐವಿಆರ್‌ಎಸ್ ಪದ್ದತಿಯಲ್ಲಿ ವರ್ಷಪೂರ್ತಿ 24 ಗಂಟೆಗಳೂ ಲಭ್ಯವಿರುತ್ತದೆ. ಕಾಲ್ ಸೆಂಟರ್ ಪ್ರತಿನಿಧಿಗಳು ಬೆಳಗ್ಗೆ 7 ಗಂಟೆಯಿಂದ ರಾತ್ರಿ 11 ಗಂಟೆ ತನಕ(ಸೋಮವಾರದಿಂದ ಶನಿವಾರ) ಲಭ್ಯರಾಗುತ್ತಾರೆ. ಭಾನುವಾರಗಳಂದು ಬೆ. 8 ರಿಂದ ಸಂಜೆ 5 ರವರೆಗೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ.

Comments (wait until it loads)
loading...
class="clear">
error: Content is protected !!

News Mirchi is Stephen Fry proof thanks to caching by WP Super Cache