ಬುರ್ಹಾನ್ ವಾನಿ ಡೇ ರ್ಯಾಲಿಗೆ ಅನುಮತಿ ಹಿಂಪಡೆದ ಬ್ರಿಟನ್ |News Mirchi

ಬುರ್ಹಾನ್ ವಾನಿ ಡೇ ರ್ಯಾಲಿಗೆ ಅನುಮತಿ ಹಿಂಪಡೆದ ಬ್ರಿಟನ್

ಲಂಡನ್: ಭಾರತೀಯ ಭದ್ರತಾಪಡೆಗಳಿಂದ ಹತನಾಗಿದ್ದ ಹಿಜ್ಬುಲ್ ಉಗ್ರ ಬುರ್ಹಾನ್ ವಾನಿಯ ಸ್ಮರಣಾರ್ಥ ಬ್ರಿಟನ್ ನ ಬರ್ಮಿಂಗ್’ಹ್ಯಾಮ್ ನಲ್ಲಿ ಕಾಶ್ಮೀರಿಗಳು ಆಯೋಜಿಸಲು ಉದ್ದೇಶಿಸಿದ್ದ ರ್ಯಾಲಿಗೆ ನೀಡಿದ್ದ ಅನುಮತಿಯನ್ನು ಬರ್ಮಿಂಗ್ ಹ್ಯಾಮ್ ಸಿಟಿ ಕೌನ್ಸಿಲ್ ಹಿಂಪಡೆದಿದೆ. ರ್ಯಾಲಿಗೆ ನೀಡಿದ ಅನುಮತಿಗೆ ಭಾರತ ಅಸಮಾಧಾನ ವ್ಯಕ್ತಪಡಿಸಿದ ನಂತರ ಈ ಬೆಳವಣಿಗೆ ನಡೆದಿದೆ. ಇದಕ್ಕೂ ಮುನ್ನ ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಕುರಿತು ಶಾಂತಿಯುತ ರ್ಯಾಲಿ ಮಾಡ್ತೀವಿ ಎಂದವರಿಗೆ ವಿಕ್ಟೋರಿಯಾ ಸ್ಕ್ವೇರ್ ಬಳಸಿಕೊಳ್ಳಲು ಬರ್ಹಿಂಗ್ ಹ್ಯಾಮ್ ಸಿಟಿ ಕೌನ್ಸಿಲ್ ಅನುಮತಿಯನ್ನು ನೀಡಿತ್ತು.

ಭಾರತದ ಆತಂಕವನ್ನು ಗಂಭೀರವಾಗಿ ಪರಿಗಣಿಸಿದ್ದಕ್ಕಾಗಿ ಭಾರತ ಹರ್ಷ ವ್ಯಕ್ತಪಡಿಸಿದೆ. ಭಾರತೀಯ ಉಪ ಹೈಕಮೀಷನರ್ ದಿನೇಶ್ ಪಟ್ನಾಯಕ್ ಬ್ರಿಟೀಶ್ ವಿದೇಶಾಂಗ ಕಛೇರಿಗೆ ಪತ್ರ ಬರೆದು ನಿರ್ಧಾರದ ಕುರಿತು ಹರ್ಷ ವ್ಯಕ್ತಪಡಿಸಿದ್ದಾರೆ.

ಹಿಜ್ಬುಲ್ ಮುಜಾಹಿದೀನ್ ಭಯೋತ್ಪಾದಕ ಸಂಘಟನೆಯ ಕಮಾಂಡರ್ ಬುರ್ಹಾನ್ ವಾನಿ ಮತ್ತು ಇಬ್ಬರು ಸಹಚರರನ್ನು ಜುಲೈ 8 2016 ರಂದು ಭದ್ರತಾಪಡೆಗಳು ಎನ್ಕೌಂಟರಿನಲ್ಲಿ ಕೊಂದಿದ್ದರು. ಕೆಲ ದಿನಗಳಿಂದ ಅವನ ಹೆಸರಿನಲ್ಲಿ ಬರ್ಮಿಂಗ್ ಹ್ಯಾಮ್ ನಲ್ಲಿ ಆಯೋಜಿಸುತ್ತಿರುವ ರ್ಯಾಲಿ ಕುರಿತು ಸಾಮಾಜಿಕ ತಾಣಗಳಲ್ಲಿ ಪೋಸ್ಟರ್ ಹರಿದಾಡುತ್ತಿತ್ತು. ಶನಿವಾರ ನಡೆಯುವ “ಕಾಶ್ಮೀರ ರ್ಯಾಲಿಯಲ್ಲಿ” ಪಾಲ್ಗೊಳ್ಳುವಂತೆ ಕರೆ ನೀಡಲಾಗಿತ್ತು.

ಬ್ರಿಟನ್ ನಲ್ಲಿನ ಭಾರತೀಯ ಹೈಕಮೀಷನರ್ ವೈ.ಕೆ.ಸಿನ್ಹಾ ಅವರು ರ್ಯಾಲಿಯನ್ನು ಬ್ರಿಟೀಷ್ ನೆಲದಲ್ಲಿ ಭಾರತವ ವಿರೋಧಿ ಚಟುವಟಿಕೆ ಎಂದು ಬಣ್ಣಿಸಿದ್ದರು. ಭಾರತ ವಿರೋಧಿ ಚಟುವಟಿಕೆಗೆ ಬ್ರಿಟನ್ ಅನುಮತಿ ನೀಡಿರುವುದು ಭಾರತೀಯರಿಗೆ ಬೇಸರ ತರಿಸಿದೆ ಎಂದು ಸಿನ್ಹಾ ಹೇಳಿದ್ದರು. ನಮ್ಮದೂ ಪ್ರಜಾಪ್ರಭುತ್ವವಾಗಿದ್ದು, ನಾವು ಯಾವುದೇ ಮಿತ್ರ ರಾಷ್ಟ್ರಗಳ ಮೇಲೆ ಪ್ರಭಾವ ಬೀರುವಂತಹ ವಿಷಯಗಳ ಕುರಿತು ನಾವು ಚರ್ಚೆಸುವುದಿಲ್ಲ ಎಂದು ಭಾರತ ಮತ್ತು ಬ್ರಿಟನ್ ಸಂಬಂಧಗಳ ಕುರಿತ “ವಿನ್ನಿಂಗ್ ಪಾರ್ಟನರ್’ಷಿಪ್” ಪುಸ್ತಕ ಬಿಡುಗಡೆ ವೇಳೆ ಹೇಳಿದ್ದರು.

Loading...
loading...
error: Content is protected !!