ಬ್ರಿಟನ್ ಸಂಸತ್ತಿಗೆ ಆಯ್ಕೆಯಾದ ಮೊದಲ ಸಿಖ್ ಮಹಿಳೆ |News Mirchi

ಬ್ರಿಟನ್ ಸಂಸತ್ತಿಗೆ ಆಯ್ಕೆಯಾದ ಮೊದಲ ಸಿಖ್ ಮಹಿಳೆ

ಲಂಡನ್: ಬ್ರಿಟನ್ ಚುನಾವಣೆಯಲ್ಲಿ ಮೊಟ್ಟ ಮೊದಲ ಬಾರಿಗೆ ಒಬ್ಬ ಸಿಖ್ ಮಹಿಳೆ ಐತಿಹಾಸಿಕ ಗೆಲುವು ದಾಖಲಿಸಿ ಸಂಸತ್ತಿಗೆ ಆಯ್ಕೆಯಾಗಿದ್ದಾರೆ. ಪ್ರತಿಪಕ್ಷ ಲೇಬರ್ ಪಕ್ಷಕ್ಕೆ ಸೇರಿದ ಪ್ರೀತ್ ಕೌರ್ ಗಿಲ್, ಬರ್ಮಿಂಗ್ ಹ್ಯಾಮ್ ಎಡ್ಜ್ ಬಾಸ್ಟನ್ ನಿಂದ ಸ್ಪರ್ಧಿಸಿ 24,124 ಮತಗಳಿಸಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಕನ್ಸರ್ವೇಟಿವ್ ಪಕ್ಷದ ಅಭ್ಯರ್ಥಿ ಕರೋಲಿನ್ ಸ್ಕ್ವೇರ್ ವಿರುದ್ಧ ಗಿಲ್ 6,917 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಎಡ್ಜ್ ಬಾಸ್ಟನ್ ನಿಂದ ಸಂಸತ್ತಿಗೆ ಆಯ್ಕೆಯಾಗಿರುವುದಕ್ಕೆ ಪ್ರೀತ್ ಕೌರ್ ಗಿಲ್  ಹರ್ಷ ವ್ಯಕ್ತಪಡಿಸಿದ್ದಾರೆ.

ಲೇಬರ್ ಪಾರ್ಟಿಗೆ ಸೇರಿದ ಮತ್ತೊಬ್ಬ ಸಿಖ್ ಅಭ್ಯರ್ಥಿ ತನ್ ಮನ್ ಜೀತ್ ಸಿಂಗ್ ಸಹಾ ಕನ್ಸರ್ವೇಟಿವ್ ಅಭ್ಯರ್ಥಿ ವಿರುದ್ಧ 16,998 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ. ಸ್ಲೋಗ್ ಕ್ಷೇತ್ರದಿಂದ ತನ್ ಮನ್ ಜೀತ್ ಸ್ಪರ್ಧಿಸಿ ಒಟ್ಟು 34,170 ಮತಗಳನ್ನು ಬುಟ್ಟಿಗೆ ಹಾಕಿಕೊಂಡಿದ್ದಾರೆ. ತಮ್ಮ ಗೆಲುವಿನ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ತನ್ ಮನ್ ಜೀತ್ ಸಿಂಗ್, ಸಿಖ್ಖರಿಗೆ ಸ್ಪರ್ಧಿಸಲು ಅವಕಾಶ ನೀಡಿದ ಲೇಬರ್ ಪಕ್ಷಕ್ಕೆ ಧನ್ಯವಾದಗಳನ್ನು ಅರ್ಪಿಸಿದರು. ಇದೇ ಪಕ್ಷದಿಂದ ಸ್ಪರ್ಧಿಸಿದ ಮತ್ತೊಬ್ಬ ಸಿಖ್ ಅಭ್ಯರ್ಥಿ ಕುಲ್ದೀಪ್ ಪ್ರತಿಸ್ಪರ್ಧಿ ವಿರುದ್ಧ 720 ಮತಗಳ ಅಂತರದಿಂದ ಸೋಲು ಕಂಡಿದ್ದಾರೆ. ಬ್ರಿಟನ್ ಸಂಸತ್ತಿಗೆ ಇಬ್ಬರು ಸಿಖ್ ಅಭ್ಯರ್ಥಿಗಳು ಆಯ್ಕೆಯಾಗಿರುವುದು ಇದೇ ಮೊದಲು.

  • No items.

Loading...
loading...
error: Content is protected !!