ಪತಿಯ ಸಾವಿನ ಸುದ್ದಿಯನ್ನು ನೇರಪ್ರಸಾರದಲ್ಲಿ ಓದಿದ ನ್ಯೂಸ್ ರೀಡರ್! |News Mirchi

ಪತಿಯ ಸಾವಿನ ಸುದ್ದಿಯನ್ನು ನೇರಪ್ರಸಾರದಲ್ಲಿ ಓದಿದ ನ್ಯೂಸ್ ರೀಡರ್!

ರಾಯ್ಪುರ: ಚತ್ತೀಸ್ಘಡದ ಸುಪ್ರೀತ್ ಕೌರ್(28) ಎಂಬ ಸುದ್ದಿ ವಾಚಕಿ ಟಿವಿ ಚಾನೆಲ್ ನಲ್ಲಿ ಸುದ್ದಿ ಓದುತ್ತಿದ್ದಳು. ಬುಲೆಟಿನ್ ಆರಂಭವಾದ ಕೆಲ ಹೊತ್ತಿನಲ್ಲಿ ಅಪಘಾತಕ್ಕೆ ಸಂಬಂಧಿಸಿದ ವಿಷಯಗಳು ಹೇಳಬೇಕಾಗಿ ಬಂತು. ಮತ್ತಷ್ಟು ವಿವರಗಳಿಗಾಗಿ ಸ್ಥಳೀಯ ಪತ್ರಕರ್ತನನ್ನು ಸಂಪರ್ಕಿಸಿದಳು ಈಕೆ. ಕಾರು ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದಾರೆಂದು ಆತ ಹೇಳಿದರೂ, ಆ ಸಮಯದಲ್ಲಿ ಅವರ ಹೆಸರುಗಳನ್ನು ಆತ ಹೇಳಲಾಗಲಿಲ್ಲ. ಆದರೆ ಪತ್ರಕರ್ತ ಹೇಳಿದ್ದನ್ನು ಗ್ರಹಿಸಿದ ಮತ್ತು ದೃಶ್ಯಾವಳಿಗಳಲ್ಲಿ ತನ್ನ ಪತಿ ಸ್ನೇಹಿತರೊಂದಿಗೆ ತೆರಳಿದ್ದ ಕಾರನ್ನು ಗುರುತು ಹಿಡಿದು ವಿಷಯ ಅರ್ಥಮಾಡಿಕೊಂಡ ನ್ಯೂಸ್ ರೀಡರ್, ಸತ್ತವರಲ್ಲಿ ತನ್ನ ಪತಿಯೂ ಇದ್ದಾರೆಂದು, ತನ್ನ ಪತಿಯ ಸುದ್ದಿಯೇ ತಾನು ನೇರಪ್ರಸಾರದಲ್ಲಿ ಹೇಳಿದ್ದೆಂದು ಅರ್ಥ ಮಾಡಿಕೊಂಡಳು. ಕೂಡಲೇ ನೋವನ್ನು ನುಂಗಿ ಬುಲೆಟಿನ್ ಮುಂದುವರೆಸಿದರೂ, ಕ್ಯಾಮೆರಾ ಆಫ್ ಆಗುತ್ತಿದ್ದಂತೆ ಗೊಳೋ ಎಂದು ಅತ್ತುಬಿಟ್ಟಳು. ಶನಿವಾರ ಬೆಳಗ್ಗೆ ಐಬಿಸಿ24 ಚಾನೆಲ್ ನಲ್ಲಿ ಈ ಸುದ್ದಿ ಪ್ರಸಾರವಾಯಿತು.

Loading...
loading...
error: Content is protected !!