ಕೇಂದ್ರ ಬಡ್ಜೆಟ್ ಪರಿಣಾಮ, ಯಾವುದು ದುಬಾರಿ ಯಾವುದು ಅಗ್ಗ.. – News Mirchi

ಕೇಂದ್ರ ಬಡ್ಜೆಟ್ ಪರಿಣಾಮ, ಯಾವುದು ದುಬಾರಿ ಯಾವುದು ಅಗ್ಗ..

ಆರ್ಥಿಕ ಸಚಿವ ಅರುಣ್ ಜೇಟ್ಲಿ ಇಂದು ಮಂಡಿಸಿದ ಬಡ್ಜೆಟ್ ಪರಿಣಾಮ ಯಾವ ಯಾವ ವಸ್ತುಗಳಲ್ಲಿ ಬೆಲೆ ಹೆಚ್ಚಳ ಮತ್ತು ಕಡಿಮೆಯಾಗಲಿವೆ ಎಂಬುದನ್ನು ತಿಳಿಯೋಣ ಬನ್ನಿ..

ಪ್ರತಿ ಬಡ್ಜೆಟ್ ನಂತರವೂ ಆಗುವಂತೆ ಈ ಬಾರಿಯೂ ಸಿಗರೇಟು, ಮೊಬೈಲ್ ಫೋನ್, ಬೀಡಿಗಳು, ತಂಬಾಕು ಉತ್ಪನ್ನಗಳು, ಗೋಡಂಬಿ, ವಾಟರ್ ಫಿಲ್ಟರ್, ಐಷಾರಾಮಿ ಕಾರು ಮತ್ತು ಬೈಕುಗಳು, ಸರಕು ಸಾರಿಗೆ, ಆಮದು ಮಾಡಿಕೊಳ್ಳುವ ಆಭರಣಗಳು ಮತ್ತಷ್ಟು ದುಬಾರಿಯಾಗಲಿವೆ. ಸೆಲ್ ಫೋನ್ ಬಿಡಿಭಾಗಗಳ ಮೇಲೆ ವಿಧಿಸಿದ ತೆರಿಗೆಯ ಕಾರಣ ಮೊಬೈಲ್ ಗಳು ತುಸು ದುಬಾರಿಯಾಗಲಿವೆ. ಮೊಬೈಲ್ ಗಳಲ್ಲಿ ಬಳಸುವ ಸರ್ಕ್ಯೂಟ್ ಬೋರ್ಡ್(ಪಿಸಿಬಿ) ಗಳ ಮೇಲೆ ಶೇ.2 ರಷ್ಟು ತೆರಿಗೆ ವಿಧಿಸಲಾಗಿದೆ. ಇದರಿಂದಾಗಿ ಫೋನ್ ಬೆಲೆಯಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ. ಸಾವಿರ ಸಿಗರೇಟಿನ ಮೇಲೆ ವಿಧಿಸುತ್ತಿದ್ದ ತೆರಿಗೆ ರೂ.215 ರಿಂದ 311 ಕ್ಕೆ ಹೆಚ್ಚಳ ಮಾಡಲಾಗಿದೆ, ಪಾನ್ ಮಸಾಲ ಮೇಲಿನ ತೆರಿಗೆ ಶೇ.6 ರಿಂದ 9 ಕ್ಕೇರಿಸಲಾಗಿದೆ. ಎಲ್‌ಇ‌ಡಿ ಬಲ್ಬುಗಳ ಬೆಲೆ ಏರಿಕೆಯಾಗಲಿದೆ.

ಬೆಲೆ ಕಡಿಮೆಯಾಗುವ ಪಟ್ಟಿಯಲ್ಲಿ ಇ-ಟಿಕೆಟ್ ಗಳು, ವೈದ್ಯಕೀಯ ಉಪಕರಣಗಳು, ಔಷಧಿಗಳು, ಸಿಸಿಟಿವಿ ಕ್ಯಾಮೆರಾ, ಮೂಲಸೌಕರ್ಯಗಳಲ್ಲಿ ಬಳಸುವ ಯಂತ್ರಗಳು, ಕೃಷಿ ಉಪಕರಣಗಳು, ಸ್ವೈಪಿಂಗ್ ಯಂತ್ರಗಳು, ಇಂಟರ್ನೆಟ್ ಸಂಪರ್ಕ, ಸ್ಮಾರ್ಟ್ ಫೋನ್ ಡಾಟಾ, ಸೌರ ವಿದ್ಯುತ್ ಫಲಕಗಳು, ಬೆಳ್ಳಿ ಅಭರಣಗಳು, ಬೆಳ್ಳಿ ನಾಣ್ಯಗಳು ಮುಂತಾದವುಗಳ ಬೆಲೆಯಲ್ಲಿ ಕಡಿಮೆಯಾಗಬಹುದು.

Contact for any Electrical Works across Bengaluru

Loading...

Leave a Reply

Your email address will not be published.

error: Content is protected !!