ನಿಗದಿತ ವೇಳಾಪಟ್ಟಿಯಂತೆ ಬಡ್ಜೆಟ್

ಸಂಸದ ಇ.ಅಹಮದ್ ನಿಧನರಾಗಿದ್ದರೂ, ಕೇಂದ್ರ ಬಜೆಟ್-2017 ನಿಗದಿತ ಸಮಯಕ್ಕೆ ಅಂದರೆ ಇಂದು ಬೆ. 11 ಗಂಟೆಗೆ ಸಂಸತ್ತಿನಲ್ಲಿ ಮಂಡಿಸಲಾಗುತ್ತದೆ. ಬೆಳಗ್ಗೆ ಅಹಮದ್ ನಿಧನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಬಡ್ಜೆಟ್ ಮುಂದುವರೆಸುವ ಕುರಿತು ವಿರೋಧ ಪಕ್ಷಗಳೊಂದಿಗೆ ಚರ್ಚೆ ನಡೆಸುತ್ತದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಬಲ್ಲ ಮೂಲಗಳ ಪ್ರಕಾರ ಕೇಂದ್ರ ಸರ್ಕಾರ ಬಡ್ಜೆಟ್ ಮುಂದೂಡದೇ ಪೂರ್ವ ನಿಗದಿತ ಸಮಯಕ್ಕೆ ಮಂಡಿಸಲಾಗುತ್ತದೆ.

ನೋಟು ರದ್ದಾದ ನಂತರ ಮಂಡಿಸುತ್ತಿರುವ ಮೊದಲ ಬಡ್ಜೆಟ್ ಇದಾದ್ದರಿಂದ, ಜನರಿಗೆ ಈ ಬಡ್ಜೆಟ್ ಮೇಲೆ ಹೆಚ್ಚು ಕುತೂಹಲವಿದೆ.ಇದೇ ಮೊದಲ ಬಾರಿಗೆ ರೈಲ್ವೇ ಬಡ್ಜೆಟ್ ಅನ್ನು ಸಾಮಾನ್ಯ ಬಡ್ಜೆಟ್ ನಲ್ಲಿಯೇ ಮಂಡಿಸುತ್ತಿದ್ದಾರೆ. ನೋಟು ಅನಾಣ್ಯೀಕರಣದ ನಂತರ ಉಂಟಾಗಿರುವ ಸಮಸ್ಯೆಗಳ ಪರಿಹಾರಕ್ಕೆ ತೆರಿಗೆ ಇಳಿಕೆಯಾಗಬಹುದೆಂದು ಹೇಳಲಾಗುತ್ತಿದೆ. ತೆರಿಗೆ ವಿನಾಯ್ತಿ ಮಿತಿಯನ್ನು 2.5 ಲಕ್ಷಗಳಿಂದ 3 ಲಕ್ಷಗಳಿಗೇರಿಸುವ ಸಾಧ್ಯತೆ ಇದೆ.

English Summary: Union Budget 2017 will be presented on schedule in the Parliament today despite Kerala MP E Ahamed’s death.