ಒಂದು ಲೀಟರ್ ಮೂತ್ರಕ್ಕೆ 1 ರೂಪಾಯಿ! – News Mirchi

ಒಂದು ಲೀಟರ್ ಮೂತ್ರಕ್ಕೆ 1 ರೂಪಾಯಿ!

ಇನ್ನು ಮುಂದೆ ಮೂತ್ರಕ್ಕೂ ಬೆಲೆ ಬರಲಿದೆ. ಒಂದು ಲೀಟರ್ ಜನರ ಮೂತ್ರಕ್ಕೆ ಸರ್ಕಾರ 1 ರೂಪಾಯಿ ನಿಗದಿಪಡಿಸಿದೆ. ದೇಶದಲ್ಲಿ ಗೊಬ್ಬರದ ಕೊರತೆಯನ್ನು ನೀಗಿಸಲು ಕೇಂದ್ರ ಸರ್ಕಾರ ಯಾರೂ ನಿರೀಕ್ಷಿಸದ ತೀರ್ಮಾನ ಕೈಗೊಂಡಿದೆ. ಈ ವಿಷಯವನ್ನು ಸ್ವತಃ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಮೂತ್ರ ಬ್ಯಾಂಕ್ ಗಳಲ್ಲಿ ಸಂಗ್ರಹಿಸಿದ ಮೂತ್ರದಿಂದ ಯೂರಿಯಾವನ್ನು ತಯಾರಿಸಬಹುದು. ಇದರಿಂದಾಗಿ ಯೂರಿಯಾವನ್ನು ಆಮದು ಮಾಡಿಕೊಳ್ಳುವ ಅಗತ್ಯವೂ ಇರುವುದಿಲ್ಲ. ಅತಿ ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಯೂರಿಯಾವನ್ನು ನಮ್ಮ ರೈತರಿಗೆ ನೀಡಬಹುದು ಎಂದು ಅವರು ಹೇಳಿದ್ದಾರೆ.

ಮೂತ್ರದಲ್ಲಿ ನೈಟ್ರೋಜನ್ ಅಂಶವು ಹೆಚ್ಚಾಗಿರುತ್ತದೆ. ಆದರೆ ಇದನ್ನು ನಾವು ಸದುಪಯೋಗಪಡಿಸಿಕೊಳ್ಳುತ್ತಿಲ್ಲ. ದೇಶದಲ್ಲಿ ತ್ಯಾಜ್ಯವನ್ನು ಸದುಪಯೋಗಪಡಿಸಿಕೊಳ್ಳುವ ಇಂತಹ ಚಿಂತನೆಯನ್ನು ಎಲ್ಲರೂ ಸ್ವಾಗತಿಸುತ್ತಾರೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.

ಮೂತ್ರದಿಂದ ಯೂರಿಯಾ ತಯಾರಿಸುವ ಪ್ರಯತ್ನವನ್ನು ಮೊದಲು ಪ್ರಾಯೋಗಿಕವಾಗಿ ಮಹಾರಾಷ್ಟ್ರದ ನಾಗ್ಪುರದಲ್ಲಿ ಕೈಗೊಳ್ಳಲಿದ್ದಾರಂತೆ. ಆಯ್ದ ಪ್ರದೇಶಗಳ ಸರ್ಕಾರಿ ಕಛೇರಿಗಳಲ್ಲಿ ಯೂರಿನ್ ಬ್ಯಾಂಕ್ ಸ್ಥಾಪಿಸುವುದಾಗಿ ಹೇಳಿದರು. ರೈತರು, ಸ್ಥಳೀಯರು ಯಾರೇ ಆಗಲಿ, ಸರ್ಕಾರ ನೀಡುವ ಕ್ಯಾನ್ ಗಳಲ್ಲಿ 10 ಲೀಟರ್ ಮೂತ್ರವನ್ನು ಮೂತ್ರ ಬ್ಯಾಂಕ್ ಗೆ ನೀಡಿದರೆ ಲೀಟರ್ ಗೆ 1 ರೂಪಾಯಿಯಂತೆ 10 ರೂಪಾಯಿ ನೀಡುವುದಾಗಿ ಅವರು ಹೇಳಿದ್ದಾರೆ.

Click for More Interesting News

Loading...
error: Content is protected !!