ದಾವೂದ್ ಆಸ್ತಿ ಮುಟ್ಟುಗೋಲು – News Mirchi

ದಾವೂದ್ ಆಸ್ತಿ ಮುಟ್ಟುಗೋಲು

ಭೂಗತ ಪಾತಕಿ ದಾವೂದ್ ಇಬ್ರಾಹಿಂ ಗೆ ಸೇರಿದ ಆಸ್ತಿಗಳನ್ನು ಯುನೈಟೆಡ್ ಅರಬ್ ಎಮಿರೇಟ್ಸ್ ಸರ್ಕಾರ ಸ್ವಾಧೀನಪಡಿಸಿಕೊಂಡಿದೆ. ದಾವೂದ್ ಗೆ ಅನುಕಂಪ ವ್ಯಕ್ತಪಡಿಸುವವರು ಅಲ್ಲಿ ಹೆಚ್ಚಾಗಿರುವುದರಿಂದ ಅರಬ್ ಸರ್ಕಾರದ ಈ ನಡೆ ಮಹತ್ವ ಪಡೆದಿದೆ. ಒಟ್ಟು ವಶಪಡಿಸಿಕೊಂಡ ಆಸ್ತಿ 15,000 ಕೋಟಿ ರೂಪಾಯಿ ಮೌಲ್ಯ ಹೊಂದಿದೆ ಎಂದು ಅಂದಾಜಿಸಲಾಗಿದೆ.

ಭೂಗತ ಪಾತಕಿಗೆ ಸೇರಿದ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಭಾರತ ಸರ್ಕಾರ ಅಲ್ಲಿನ ಸರ್ಕಾರಕ್ಕೆ ಮನವಿ ಮಾಡಿತ್ತು.

ದಾವೂದ್ ಇಬ್ರಾಹಿಂ ನನ್ನು ಭಾರತಕ್ಕೆ ಕರೆತರಲು ಭಾರತ ಸರ್ಕಾರ ಪ್ರಯತ್ನಗಳನ್ನು ಮುಂದುವರೆಸುತ್ತಿದೆ ಎಂದು ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಹೇಳಿಕೆ ನೀಡಿದ ದಿನವೇ ಈ ಬೆಳವಣಿಗೆ ನಡೆದಿದೆ. ಈ ಹಿನ್ನೆಲೆಯಲ್ಲಿ ದಾವೂದ್ ನನ್ನು ಭಾರತಕ್ಕೆ ಕರೆತರುವ ವಿಷಯಕ್ಕೆ ಮತ್ತೆ ರೆಕ್ಕೆ ಬಂದಿದೆ.

Loading...

Leave a Reply

Your email address will not be published.