ರಾಮಾಯಣ ಮ್ಯೂಸಿಯಂ ಗೆ ಗ್ರೀನ್ ಸಿಗ್ನಲ್ ನೀಡಿದ ಯೋಗಿ ಆದಿತ್ಯನಾಥ್ |News Mirchi

ರಾಮಾಯಣ ಮ್ಯೂಸಿಯಂ ಗೆ ಗ್ರೀನ್ ಸಿಗ್ನಲ್ ನೀಡಿದ ಯೋಗಿ ಆದಿತ್ಯನಾಥ್

ಉತ್ತರಪ್ರದೇಶದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಹೈಟೆಕ್ ರಾಮಾಯಣ ಮ್ಯೂಸಿಯಂ ಗೆ ಅಯೋಧ್ಯೆಯಿಂದ 25 ಕಿಲೋ ಮೀಟರ್ ದೂರದಲ್ಲಿ ಗುರುತಿಸಲಾಗಿದ್ದ 20 ಎಕರೆ ಭೂಮಿಯನ್ನು ನೀಡಲು ನೂತನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಒಪ್ಪಿಗೆ ಸೂಚಿಸಿದ್ದಾರೆ.

ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವಾಲಯ ರಾಮಾಯಣ ಮ್ಯೂಸಿಯಂಗಾಗಿ ಈ ಭೂಮಿಯನ್ನು ಆಯ್ಕೆ ಮಾಡಿತ್ತು. ಆದರೆ ಮ್ಯೂಸಿಯಂ ನಿರ್ಮಾಣದ ಕೇಂದ್ರದ ಪ್ರಸ್ತಾವನೆಗೆ ಅಂದಿನ ಅಖಿಲೇಶ್ ಯಾದವ್ ಸರ್ಕಾರ ಒಪ್ಪಿಗೆ ನೀಡಿರಲಿಲ್ಲ. ಇದೀಗ ಮುಖ್ಯಮಂತ್ರಿಯಾಗುತ್ತಿದ್ದಂತೆ ಯೋಗಿ ಆದಿತ್ಯನಾಥ್ ಮ್ಯೂಸಿಯಂ ನಿರ್ಮಾಣಕ್ಕೆ ಭೂಮಿ ನೀಡಲು ಒಪ್ಪಿಗೆ ನೀಡಿದ್ದಾರೆ. ಮೂಲಗಳ ಪ್ರಕಾರ ಮುಂದಿನ ಹತ್ತು ದಿನಗಳೊಳಗೆ ಇದಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳು ಮುಗಿಯಲಿವೆ.

Loading...
loading...
error: Content is protected !!