ಮಾಯಾವತಿ ನಡೆಸಿದ ಹಗರಣದ ತನಿಖೆಗೆ ಯೋಗಿ ಆದೇಶ |News Mirchi

ಮಾಯಾವತಿ ನಡೆಸಿದ ಹಗರಣದ ತನಿಖೆಗೆ ಯೋಗಿ ಆದೇಶ

ಲಕ್ನೋ: ಭ್ರಷ್ಟಾಚಾರ ರಹಿತ ಉತ್ತರಪ್ರದೇಶವನ್ನಾಗಿ ಬದಲಾಯಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಮೂಲಾಗ್ರ ಬದಲಾವಣೆಗೆ ಮುನ್ನುಡಿ ಬರೆಯುತ್ತಿದ್ದಾರೆ. ಹಿಂದಿನ ಸರ್ಕಾರಗಳ ಆಡಳಿತಗಳಲ್ಲಿ ನಡೆದ ಹಗರಣಗಳ ವಿರುದ್ಧ ತನಿಖೆಗೆ ನಡೆಸುತ್ತಾ ಪ್ರತಿಪಕ್ಷಗಳ ನಿದ್ದೆಗೆಡಿಸುತ್ತಿದ್ದಾರೆ. ಬಿ.ಎಸ್.ಪಿ ನಾಯಕಿ ಮಾಯಾವತಿ ಮುಖ್ಯಮಂತ್ರಿಯಾಗಿದ್ದ ವೇಳೆ 21 ಸಕ್ಕರೆ ಕಾರ್ಖಾನೆಗಳನ್ನು ಅತಿ ಕಡಿಮೆ ಬೆಲೆಗೆ ಮಾರಾಟ ಮಾಡಿದ್ದರ ಕುರಿತು ಅಂದು ದೊಡ್ಡ ರಾದ್ದಾಂತವೇ ಆಗಿತ್ತು. ಅದರಲ್ಲಿ ನೂರಾರು ಕೋಟಿ ರೂಪಾಯಿಗಳ ಭ್ರಷ್ಟಾಚಾರ ನಡೆದಿದ್ದಾಗಿ ಆರೋಪಗಳು ಬಂದಿದ್ದವು.

ಕಬ್ಬು ಅಭಿವೃದ್ಧಿ, ಸಕ್ಕರೆ ಉದ್ಯಮ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಮುಖ್ಯಮಂತ್ರಿ ಆದಿತ್ಯನಾಥ್ ತನಿಖೆಗೆ ಆದೇಶಿಸಿದ್ದಾರೆ. ಜನರಿಗೆ ಸಂಬಂಧಿಸಿದ ಆಸ್ತಿಗಳನ್ನು ಮಾರಾಟ ಮಾಡಲು ಯಾರಿಗೂ ಅನುಮತಿ ಇಲ್ಲ, ಅದೂ ಅತ್ಯಂತ ಕಡಿಮೆ ಬೆಲೆಗೆ ಮಾರಿರುವುದರ ಹಿಂದೆ ದೊಡ್ಡ ಭ್ರಷ್ಟಾಚಾರವೇ ನಡೆದಿರುವ ಸಾಧ್ಯತೆ ಇದೆ ಎಂದು ಆದಿತ್ಯನಾಥ್ ಹೇಳಿದ್ದಾರೆ. ಮಾಯಾವತಿ ಸುಮಾರು ರೂ. 1180 ಕೋಟಿ ಹಗರಣವನ್ನು ಮಾಡಿದ್ದರೂ, ನಂತರ ಬಂದಿದ್ದ ಸಮಾಜವಾದಿ ಪಕ್ಷ ಅದನ್ನು ಕಡೆಗಣಿಸಿತು ಎಂದು ಯೋಗಿ ಆರೋಪಿಸಿದರು. ಈಗಾಗಲೇ ಅಧಿಕಾರ ದುರುಪಯೋಗ ನಡೆದಿರುವುದಾಗಿ ಕಾಗ್ ಬಹಿರಂಗಪಡಿಸಿದೆ, ಅಗತ್ಯಬಿದ್ದರೆ ಕೇಂದ್ರ ತನಿಖಾ ಸಂಸ್ಥೆಯೊಂದಿಗೆ ತನಿಖೆ ನಡೆಸಲೂ ಹಿಂಜರಿಯುವುದಿಲ್ಲ ಎಂದು ಆದಿತ್ಯನಾಥ್ ಖಡಾಖಂಡಿತವಾಗಿ ಹೇಳಿದ್ದಾರೆ.

Loading...
loading...
error: Content is protected !!