ಉತ್ತರಪ್ರದೇಶದಲ್ಲಿ ಉಪನ್ಯಾಸಕರು ಜೀನ್ಸ್ ಟೀ ಶರ್ಟ್ ಧರಿಸಿ ಕಾಲೇಜಿಗೆ ಬರುವಂತಿಲ್ಲ – News Mirchi

ಉತ್ತರಪ್ರದೇಶದಲ್ಲಿ ಉಪನ್ಯಾಸಕರು ಜೀನ್ಸ್ ಟೀ ಶರ್ಟ್ ಧರಿಸಿ ಕಾಲೇಜಿಗೆ ಬರುವಂತಿಲ್ಲ

ಉತ್ತರಪ್ರದೇಶದಲ್ಲಿ ಈಗಾಗಲೇ ಸರ್ಕಾರಿ ಕಛೇರಿಗಳು, ಶಾಲೆ ಕಾಲೇಜು ಮುಂತಾದೆಡೆ ಪಾನ್ ಮಸಾಲಾ, ಗುಟ್ಕಾ ಸೇವನೆ, ಧೂಮಪಾನ ನಿಷೇಧಿಸಿರುವ ಯೋಗಿ ಆದಿತ್ಯನಾಥ್ ಸರ್ಕಾರ, ಇದೀಗ ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳಲ್ಲಿ ಕೆಲಸ ಮಾಡುವ ಉಪನ್ಯಾಸಕರು ಮತ್ತಿತರ ಸಿಬ್ಬಂದಿ ಜೀನ್ಸ್, ಟೀ ಶರ್ಟ್ ಧರಿಸಿ ಕಾಲೇಜಿಗೆ ಹಾಜರಾಗಬಾರದೆಂದು ಆದೇಶ ಜಾರಿ ಮಾಡಿದೆ.

ಉಡುಪಿನ ವಿಷಯದಲ್ಲಿ ಉಪನ್ಯಾಸಕರು ಮತ್ತಿತರ ಸಿಬ್ಬಂದಿಗಳು ವಿದ್ಯಾರ್ಥಿಗಳಿಗೆ ಮಾದರಿಯಾಗಿ ನಿಲ್ಲಬೇಕು ಎಂದು‌ ಸರ್ಕಾರ ಹೇಳಿದೆ. ಹೇಗೂ ವಿದ್ಯಾರ್ಥಿಗಳಿಗೆ ಸಮವಸ್ತ್ರವಿರುತ್ತದೆ, ಅಧ್ಯಾಪಕರೂ ಉಡುಪು ಧರಿಸುವ ವಿಷಯದಲ್ಲಿ ಒಂದು ವಿಧಾನ ಅಳವಡಿಸಿಕೊಂಡರೆ, ವಿದ್ಯಾರ್ಥಿಗಳೂ ಅವರನ್ನು ಅನುಸರಿಸುತ್ತಾರೆ ಎಂಬುದು ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರ ಅಭಿಪ್ರಾಯ.

Contact for any Electrical Works across Bengaluru

Loading...
error: Content is protected !!