ಜನಬೆಂಬಲವನ್ನು ನಂಬಿರುವ ಉಪ್ಪಿ ರಾಜಕಾರಣ – News Mirchi
We are updating the website...

ಜನಬೆಂಬಲವನ್ನು ನಂಬಿರುವ ಉಪ್ಪಿ ರಾಜಕಾರಣ

ಉಪೇಂದ್ರ ರಾಜಕೀಯಕ್ಕೆ ಬರ್ತಾರಂತೆ, ಅದೋ ಬಂದೇ ಬಿಟ್ರು, ಬಂದ್ರೆ ಯಾವ ಪಕ್ಷ ಸೇರಬಹುದು, ಅವರೇ ಹೊಸ ಪಕ್ಷ ಕಟ್ತಾರಂತೆ…. ಈ ಹಿಂದೆ ಹಲವು ಬಾರಿ ಇಂತಹ ಅಂತೆ ಕಂತೆಗಳು ಹರಿದಾಡಿದ್ದವು. ಇದೀಗ ಸ್ವತಃ ಉಪೇಂದ್ರ ರವರೇ ರಾಜಕೀಯ ಪ್ರವೇಶ ಕುರಿತು ಬಹಿರಂಗವಾಗಿ ಮಾತನಾಡಿರುವುದರಿಂದ ನಂಬಲೇಬೇಕು.

ತಮ್ಮ ತಮ್ಮ ಪಕ್ಷ ಸೇರುವಂತೆ ಕೆಲವು ಪಕ್ಷಗಳಿಂದ ಆಹ್ವಾನವೂ ಬಂದಿವೆ. ಮೂರು ಪಕ್ಷಗಳಲ್ಲಿನ ನಾಯಕರು ಒಳ್ಳೆಯ ಕೆಲಸಗಳನ್ನು ಮಾಡಿರಬಹುದು, ಆದರೆ ಪ್ರತಿಯೊಂದು ಪಕ್ಷಕ್ಕೂ ಒಂದೊಂದು ಚೌಕಟ್ಟು ಇರುತ್ತದೆ. ಅಂತಹ ಚೌಕಟ್ಟುಗಳಲ್ಲಿ ಎಲ್ಲಿ ಬಂಧಿಯಾಗುತ್ತೇನೋ ಎಂಬ ಭಯ ನನಗೆ ಎನ್ನುತ್ತಾರೆ ಉಪ್ಪಿ. ಹಾಗಾಗಿಯೇ ಅವರು ತಾವೇ ಸ್ವಂತ ಪಕ್ಷ ಕಟ್ಟುವ ತೀರ್ಮಾನಕ್ಕೆ ಬಂದಿದ್ದಾರೆ.

ಅವರ ಮಾತುಗಳು, ಚಿಂತನೆಗಳು ಕೇಳುಗರಿಗೆ ಸಿನಿಮಾ ಡೈಲಾಗ್ ನಂತೆ ಕಂಡರೂ, ಅದು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತವೆ ಎಂಬ ಪ್ರಶ್ನೆ ಎದುರಾದರೂ, ಈ ಹಿಂದಿನಿಂದಲೂ ಉಪೇಂದ್ರ ರ ರಾಜಕೀಯ ಕಲ್ಪನೆ ಕೇವಲ ಕಲ್ಪನೆಯಲ್ಲ ಎಂದು ತೋರಿಸಲು ಇದೇ ಸುಸಮಯ ಎಂದು ನಿರ್ಧರಿಸಿ ಹೆಜ್ಜೆಯಿಟ್ಟಿದ್ದಾರೆ.

ರಾಜಕೀಯ ಪ್ರವೇಶ ಕುರಿತಂತೆ ಇನ್ನೂ ಮೊದಲನೆ ಹೆಜ್ಜೆ ಇಟ್ಟಿರುವ ಉಪ್ಪಿ, ಮುಂದಿನ ದಿನಗಳಲ್ಲಿ ಪಕ್ಷದ ಹೆಸರು, ಚಿಹ್ನೆ ಮುಂತಾದ ವಿಷಯಗಳ ಕುರಿತು ಮಾಹಿತಿ ನೀಡಲಿದ್ದಾರಂತೆ. ಸಾಂಪ್ರದಾಯಿಕ ರಾಜಕಾರಣಕ್ಕಿಂತ ವಿಭಿನ್ನ ದಾರಿಯಲ್ಲಿ ನಡೆಯಲು ಹಣಬೆಂಬಲಕ್ಕಿಂತ ಜನಬೆಂಬಲ ಮುಖ್ಯ. ಜನಬೆಂಬಲವನ್ನೇ ನಂಬಿಕೊಂಡು ಉಪ್ಪಿ ರಾಜಕಾರಣ ಪ್ರವೇಶಿಸುತ್ತಿದ್ದಾರೆ. ಜನ ಹೇಗೆ ಸ್ಪಂದಿಸುತ್ತಾರೆ ಎಂಬುದು ಮುಂದಿನ ದಿನಗಳಲ್ಲಿ ಕಾದು ನೋಡಬೇಕು.

ಜನರಿಂದಲೂ ಅಭಿಪ್ರಾಯ, ಸಲಹೆ, ಸಮಸ್ಯೆಗಳು ಮತ್ತು ಅವುಗಳಿಗೆ ಪರಿಹಾರಗಳನ್ನು ಆಹ್ವಾನಿಸಿರುವ ಉಪೇಂದ್ರ, ಅವುಗಳನ್ನು ತಮ್ಮೊಂದಿಗೆ ಹಂಚಿಕೊಳ್ಳಲು ಮೂರು ಇಮೇಲ್ ವಿಳಾಸಗಳನ್ನು ನೀಡಿದ್ದಾರೆ. prajakarana1@gmail.com, prajakarana2@gmail.com, prajakarana3@gmail.com ಎಂಬ ವಿಳಾಸಕ್ಕೆ ಯಾರು ಬೇಕಾದರೂ ತಮ್ಮ ಸಲಹೆ ಸೂಚನೆಗಳನ್ನು ಕಳುಹಿಸಬಹುದು.

Contact for any Electrical Works across Bengaluru

Loading...
error: Content is protected !!