ಅವರು ಆದೇಶಿಸಿದರೆ ಮುಂದಿನ ವಾರ ಚೀನಾ ಮೇಲೆ ಪರಮಾಣು ದಾಳಿಗೆ ಸಿದ್ಧ! – News Mirchi

ಅವರು ಆದೇಶಿಸಿದರೆ ಮುಂದಿನ ವಾರ ಚೀನಾ ಮೇಲೆ ಪರಮಾಣು ದಾಳಿಗೆ ಸಿದ್ಧ!

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶ ನೀಡಿದರೆ, ಮುಂದಿನ ವಾರವೇ ಚೀನಾ ಮೇಲೆ ಪರಮಾಣು ದಾಳಿ ನಡೆಸುವುದಾಗಿ ಯು.ಎಸ್.ಪೆಸಿಫಿಕ್ ಫ್ಲೀಟ್ ಕಮಾಂಡರ್ ಸ್ಕಾಟ್ ಸ್ವಿಫ್ಟ್ ಹೇಳಿದ್ದಾರೆ. ಆಸ್ಟ್ರೇಲಿಯಾದ ಕರಾವಳಿ ಪ್ರದೇಶದಲ್ಲಿ ಅಮೆರಿಕಾ – ಆಸ್ಟ್ರೇಲಿಯಾ ನಡೆಸುತ್ತಿರವು ಜಂಟಿ ಮಿಲಿಟರಿ ಅಭ್ಯಾಸದ ನಂತರ ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಒಂದು ವೇಳೆ ಟ್ರಂಪ್ ಆದೇಶಿಸಿದರೆ ಮುಂದಿನ ವಾರವೇ ಚೀನಾ ಮೇಲೆ ಅಣ್ವಸ್ತ್ರ ದಾಳಿ ನಡೆಸುತ್ತೀರಾ ಎಂದು ವರದಿಗಾರರೊಬ್ಬರು ಕೇಳಿದ ಪ್ರಶ್ನೆಗೆ ಹೌದು ಸಿದ್ಧ, ನಮ್ಮ ಕಮಾಂಡರ್ ಇನ್ ಚೀಫ್ ಆದೇಶಗಳನ್ನು ಮಿಲಿಟರಿ ಸದಾ ಪಾಲಿಸುತ್ತದೆ ಎಂದು ಅವರು ಹೇಳಿದರು.

ಪಟ್ಟು ಸಡಿಲಿಸುತ್ತಿರುವ ಚೀನಾ?

ಆದರೆ ನಂತರ ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಪೆಸಿಫಿಕ್ ಫ್ಲೀಟ್ ವಕ್ತಾರ ಕ್ಯಾಪ್ಟನ್ ಚಾರ್ಲೀ ಬ್ರೌನ್, ಮಿಲಿಟರಿ ಮೇಲೆ ನಾಗರಿಕ ನಿಯಂತ್ರಣವನ್ನು ಪುನರುಚ್ಛರಿಸಲೆಂದೇ ಸ್ಕಾಟ್ ಆ ರೀತಿ ಉತ್ತರಿಸಿದ್ದರು ಎಂದು ಸ್ಪಷ್ಟಪಡಿಸಿದ್ದಾರೆ.

ಹೆದರುವ, ಬೆದರುವ ಪ್ರಶ್ನೆಯೇ ಇಲ್ಲ, ಚೀನಾವನ್ನು ಎದುರಿಸಲು ಭಾರತ ಸಿದ್ಧ

ಆಸ್ಟ್ರೇಲಿಯಾ ಈಶಾನ್ಯ ಪ್ರಾಂತ್ಯದಲ್ಲಿ ಯುಎಸ್, ಆಸ್ಟ್ರೇಲಿಯಾ ನಡೆಸಿದ ಈ ಜಂಟಿ ಅಭ್ಯಾಸವನ್ನು ಚೀನಾ ಗುಪ್ತಚರ ಮೂಲಗಳು ಸೂಕ್ಷ್ಮವಾಗಿ ಪರಿಶೀಲಿಸಿದವು. ಈ ಜಂಟಿ ಮಿಲಿಟರಿ ಅಭ್ಯಾಸದಲ್ಲಿ 36 ಯುದ್ಧ ನೌಕೆಗಳು ಪಾಲ್ಗೊಂಡಿದ್ದವು. ಇದರಲ್ಲಿ ಒಂದು ಏರ್ ಕ್ರಾಫ್ಟ್ ಕ್ಯಾರಿಯರ್ ಯುಎಸ್.ಎಸ್ ರೊನಾಲ್ಡ್ ರೀಗನ್ ಸೇರಿದಂತೆ 220 ಏರ್ ಕ್ರಾಫ್ಟ್, 33 ಸಾವಿರ ಜನರ ಮಿಲಿಟರಿ ಪಡೆಗಳು ಪಾಲ್ಗೊಂಡಿದ್ದವು.

ಚೀನಾದ ಗುಪ್ತಚರ ನೌಕೆ

ಈ ಚಟುವಟಿಕೆಯನ್ನು ಚೀನಾ ಸೇನೆಯ ಟೈಪ್ 815 ಡಾಂಗ್ ಡಿಯಾವೋ ಗುಪ್ತಚರ ನೌಕೆ ಆಸ್ಟ್ರೇಲಿಯಾ ಎಕ್ಸ್ ಕ್ಲೂಸಿವ್ ಎಕನಾಮಿಕ್ ಜೋನ್ ವ್ಯಾಪ್ತಿಯಲ್ಲಿದ್ದುಕೊಂಡೇ ಗಮನಿಸುತ್ತಿತ್ತು.

Contact for any Electrical Works across Bengaluru

Loading...
error: Content is protected !!