ಭಾರತಕ್ಕೆ ಬರಲಿವೆ ಅಮೆರಿಕದ ಗಾರ್ಡಿಯನ್ ಡ್ರೋನ್ – News Mirchi

ಭಾರತಕ್ಕೆ ಬರಲಿವೆ ಅಮೆರಿಕದ ಗಾರ್ಡಿಯನ್ ಡ್ರೋನ್

ವಾಷಿಂಗ್ಟನ್: ಭಾರತದ ನೌಕಾಪಡೆಗೆ ಗಾರ್ಡಿಯನ್ ಡ್ರೋನ್ ಗಳನ್ನು ಮಾರಲು ಅಮೆರಿಕಾ ಅಂಗೀಕಾರಿಸಿದೆ. ಈ ಸಂಬಂಧ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ರಕ್ಷಣಾ ಕ್ಷೇತ್ರ, ಭದ್ರತೆ ಮುಂತಾದ ಅಂಶಗಳಲ್ಲಿ ಪರಸ್ಪರ ಸಹಕಾರ ಕುರಿತು ನಡೆದ ಚರ್ಚೆಯ ನಂತರ ಈ ಒಪ್ಪಂದ ನಡೆದಿದೆ. ಈ ಒಪ್ಪಂದದ ಪ್ರಕಾರ ಭಾರತಕ್ಕೆ 22 ಪ್ರಿಡೇಟರ್ ಗಾರ್ಡಿಯನ್ ಡ್ರೋನ್ ಗಳನ್ನು ಮಾರಾಟ ಮಾಡುವುದಾಗಿ ಶ್ವೇತಭವನ ಹೇಳಿದೆ.

ಭಾರತದ ದೇಶದ ಉದ್ದದ ಸಮುದ್ರ ತೀರ ಪ್ರದೇಶದ ಮೇಲೆ ಕಣ್ಗಾವಲು ಇಡಲು ಅನುಕೂಲವಾಗುವಂತೆ ಈ ಡ್ರೋನ್ ಗಳನ್ನು ಖರೀದಿಸಲಾಗುತ್ತಿದೆ. ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿರುವ ಈ ಡ್ರೋನ್ ಗಳು 50 ಸಾವಿರ ಅಡಿ ಎತ್ತರದಲ್ಲಿ 27 ಗಂಟೆಗಳ ಕಾಲ ಹಾರಾಟ ನಡೆಸುವ ಸಾಮರ್ಥ್ಯ ಹೊಂದಿವೆ. ಅಮೆರಿಕಾ ಭಾರತಕ್ಕೆ ಮಾರಾಟ ಮಾಡುವ ಈ ಡ್ರೋನ್ ಗಳ ಒಪ್ಪಂದಕ್ಕೆ ಚೀನಾ ತೀವ್ರ ಆತಂಕ ವ್ಯಕ್ತಪಡಿಸಿತ್ತು.

Loading...