ಜನ ಆಯ್ಕೆ ಮಾಡಿದ ಸೀರೆಯನ್ನೇ ಉಟ್ಟು ಬಂದ ಅಮೆರಿಕಾ ರಾಯಭಾರಿ |News Mirchi

ಜನ ಆಯ್ಕೆ ಮಾಡಿದ ಸೀರೆಯನ್ನೇ ಉಟ್ಟು ಬಂದ ಅಮೆರಿಕಾ ರಾಯಭಾರಿ

ನವದೆಹಲಿ: ದೆಹಲಿಯಲ್ಲಿನ ಅಮೆರಿಕಾ ರಾಯಭಾರಿ ಕಛೇರಿಯಲ್ಲಿ 71ನೇ ಸ್ವಾತಂತ್ರ್ಯ ದಿನಾಚರಣೆಗೆ ಯಾವ ಸೀರೆ ಧರಿಸಬೇಕು ಎಂದು ಸಾಮಾಜಿಕ ತಾಣಗಳಲ್ಲಿ ಹತ್ತು ದಿನಗಳ ಹಿಂದೆ ಸಾಮಾಜಿಕ ತಾಣದಲ್ಲಿ ಅಭಿಪ್ರಾಯ ಕೇಳಿದ್ದ ಅಮೆರಿಕಾ ರಾಯಭಾರಿಯಾದ ಮೇರಿಕೇ ಕಾರ್ಲ್ಸನ್ ರವರು ಜನ ಸೂಚಿಸಿದ ಸೀರೆಯನ್ನೇ ಧರಿಸಿ ಬಂದು ಜನರಿಗೆ ಧನ್ಯವಾದ ಅರ್ಪಿಸಿದರು.

 

  • No items.

ಭಾರತದ ಸ್ವಾತಂತ್ರ್ಯೋತ್ಸವಕ್ಕೆ ಸೀರೆಯುಟ್ಟು ಹಾಜರಾಗಲು ಮೇರಿಕೇ ಕಾರ್ಲ್ಸನ್ ನಿರ್ಧರಿಸಿದ್ದರು. ಆದರೆ ಅವರಿಗೆ ಯಾವ ಸೇರೆ ಆಯ್ಕೆ ಮಾಡಬೇಕು ಎಂಬುದರಲ್ಲಿ ಗೊಂದಲ ಹುಟ್ಟಿಕೊಂಡಿತ್ತು. ತಾವು ಹಲವು ಸೀರೆಗಳನ್ನು ನೋಡಿ ಕೊನೆಗೆ ನಾಲ್ಕು ಸೀರೆಗಳನ್ನು ಶಾರ್ಟ್ ಲಿಸ್ಟ್ ಮಾಡಿ, ಆ ನಾಲ್ಕರಲ್ಲಿ ಯಾವುದು ಧರಿಸಲಿ ಎಂದು #SareeSearch ಎಂಬ ಹ್ಯಾಷ್ ಟ್ಯಾಗ್ ನಡಿ ಸಾಮಾಜಿಕ ತಾಣಗಳಲ್ಲಿ ಜನರ ಅಭಿಪ್ರಾಯ ಕೇಳಿದ್ದರು.

ಕೊನೆಗೆ ಕೆಂಪು ಬಣ್ಣದ ಕಾಂಜೀವರಂ ಸೀರೆಗೇ ಜನ ಹೆಚ್ಚು ಮತ ಹಾಕಿದ್ದರಿಂದ, ಅವರು ಆ ಸೀರೆಯನ್ನೇ ಧರಿಸಿ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಭಾರತೀಯ ಉಡುಪು ತಮಗೆ ತುಂಬಾ ಇಷ್ಟ ಎಂದು ಹೇಳಿಕೊಂಡಿರುವ ಈಕೆ ಹೀಗೆ ಭಾರತೀಯ ಸಂಪ್ರದಾಯವನ್ನು ಗೌರವಿಸಿದ್ದಕ್ಕೆ ಹೊಗಳಿಕೆಗೆ ಪಾತ್ರರಾಗಿದ್ದಾರೆ.

Loading...
loading...
error: Content is protected !!