ಕ್ಯಾಸ್ಪರ್ಸ್ಕಿ ಸಾಫ್ಟ್ ವೇರ್ ತೆಗೆಯುವಂತೆ ಅಮೆರಿಕದ ಎಲ್ಲಾ ಸರ್ಕಾರಿ ಸಂಸ್ಥೆಗಳಿಗೆ ಸೂಚನೆ – News Mirchi

ಕ್ಯಾಸ್ಪರ್ಸ್ಕಿ ಸಾಫ್ಟ್ ವೇರ್ ತೆಗೆಯುವಂತೆ ಅಮೆರಿಕದ ಎಲ್ಲಾ ಸರ್ಕಾರಿ ಸಂಸ್ಥೆಗಳಿಗೆ ಸೂಚನೆ

ರಷ್ಯಾದ ಯಾಂಟಿವೈರಸ್ ಸಂಸ್ಥೆಯಾದ ಕ್ಯಾಸ್ಪರ್ಸ್ಕಿ ಲ್ಯಾಬ್ ನಿಂದ ತಯಾರಾದ ಎಲ್ಲಾ ಸೆಕ್ಯೂರಿಟಿ ಸಾಫ್ಟವೇರ್ ಗಳನ್ನು ತಮ್ಮ ತಮ್ಮ ನೆಟ್ವರ್ಕ್ ಗಳಿಂದ ತೆಗೆದು ಹಾಕುವಂತೆ ಬುಧವಾರ ಅಮೆರಿಕ ಸರ್ಕಾರ ತನ್ನ ಎಲ್ಲಾ ಸರ್ಕಾರಿ ಸಂಸ್ಥೆಗಳಿಗೆ ಆದೇಶಿಸಿದೆ. ಕ್ಯಾಸ್ಪರ್ಸ್ಕಿ ತಂತ್ರಾಂಶವು ಅಮೆರಿಕದ ರಾಷ್ಟ್ರೀಯ ಭದ್ರತೆಗೆ ಹಾನಿಯುಂಟು ಮಾಡಬಹುದು ಎಂಬ ಶಂಕೆಯಿಂದ ಡೊನಾಲ್ಡ್ ಟ್ರಂಪ್ ಸರ್ಕಾರ ಈ ಸೂಚನೆ ನೀಡಿದೆ.

ಇಲಾಖೆಗಳಲ್ಲಿ ಬಳಸುತ್ತಿರುವ ಕ್ಯಾಸ್ಪರ್ಸ್ಕಿ ಲ್ಯಾಬ್ ನ ತಂತ್ರಾಂಶಗಳ ಪತ್ತೆಗೆ 30 ದಿನಗಳ ಗಡುವು ನೀಡಿದ್ದು, ಮುಂದಿನ 60 ದಿನಗಳೊಳಗೆ ಅವುಗಳ ಬಳಕೆಯನ್ನು ನಿಲ್ಲಿಸುವಂತೆ ಎಲ್ಲಾ ಇಲಾಖೆಗಳಿಗೆ ಅಲ್ಲಿನ ಸರ್ಕಾರ ಆದೇಶಿಸಿದೆ. ಕ್ಯಾಸ್ಪರ್ಸ್ಕಿ ಅಧಿಕಾರಿಗಳು ಮತ್ತು ರಷ್ಯಾದ ಗುಪ್ತಚರ ಸಂಸ್ಥೆಗಳ ನಡುವಿನ ಸಂಬಂಧದ ಬಗ್ಗೆ ಅಮೆರಿಕ ಕಳವಳ ವ್ಯಕ್ತಪಡಿಸಿದೆ ಎಂದು ಅಮೆರಿಕದ ಹೋಮ್ ಲ್ಯಾಂಡ್ ಸೆಕ್ಯೂರಿಟಿ ಹೇಳಿದೆ. ಕ್ಯಾಸ್ಪರ್ಸ್ಕಿ ಜೊತೆ ರಷ್ಯಾ ಸರ್ಕಾರ ಕೈಜೋಡಿಸಿ, ಕ್ಯಾಸ್ಪರ್ಸ್ಕಿ ತಂತ್ರಾಂಶಗಳ ಮೂಲಕ ಅಮೆರಿಕದ ಇಲಾಖೆಗಳ ಮಾಹಿತಿಯನ್ನು ಕದಿಯಬಹುದು ಎಂಬ ಶಂಕೆ ಅಮೆರಿಕದ್ದು.

ಆದರೆ ಈ ಆರೋಪಗಳನ್ನು ಕ್ಯಾಸ್ಪರ್ಸ್ಕಿ ಲ್ಯಾಬ್ ಅಲ್ಲಗೆಳೆದಿದೆ. ತಮ್ಮ ಸಂಸ್ಥೆಯ ಮೇಲೇ ಆರೋಪಗಳಿಗೆ ಸಂಬಂಧಿಸಿದಂತೆ ಇದುವರೆಗೂ ಯಾರೂ ಯಾವುದೇ ರೀತಿಯ ಪುರಾವೆಯನ್ನು ನೀಡಿಲ್ಲ. ಇವು ಆಧಾರ ರಹಿತ ಆರೋಪಗಳಾಗಿವೆ ಎಂದು ಕಂಪನಿ ಹೇಳಿದೆ.

Get Latest updates on WhatsApp. Send ‘Add Me’ to 8550851559

Contact for any Electrical Works across Bengaluru

Loading...
error: Content is protected !!