ಭಾರತಕ್ಕೆ ಒಬಾಮಾ ಸರ್ಕಾರದ ಕೊನೆಯ ಉಡುಗೊರೆ – News Mirchi

ಭಾರತಕ್ಕೆ ಒಬಾಮಾ ಸರ್ಕಾರದ ಕೊನೆಯ ಉಡುಗೊರೆ

ನವದೆಹಲಿ: ಭಾರತವನ್ನು ತನ್ನ ಅತಿ ದೊಡ್ಡ ರಕ್ಷಣಾ ಕ್ಷೇತ್ರದ ಪಾಲುದಾರನನ್ನಾಗಿ ಭಾರತವನ್ನು ಗುರುತಿಸುವ ಮೂಲಕ ಅಮೆರಿಕಾ ಅಧ್ಯಕ್ಷ ಹುದ್ದೆಯಿಂದ ನಿರ್ಗಮಿಸಲಿರುವ ಬರಾಕ್ ಒಬಾಮಾ ಸರ್ಕಾರ, ಭಾರತಕ್ಕೆ ಕೊನೆಯ ಉಡುಗೊರೆ ನೀಡಿದೆ. ಭಾರತಕ್ಕೆ ಅಗತ್ಯವಾದ ರಕ್ಷಣಾ, ಸೇನಾ ಉಪಕರಣಗಳನ್ನು ಉದಾರವಾಗಿ ಸರಬರಾಜು ಮಾಡಬೇಕು ಎಂದು ಒಬಾಮಾ ಸರ್ಕಾರ, ಮುಂದಿನ ಟ್ರಂಪ್ ಸರ್ಕಾರಕ್ಕೆ ನಿರ್ದೇಶನ ನೀಡಿದೆ.ಅಷ್ಟೇ ಅಲ್ಲದೆ ಆಸ್ಟ್ರೇಲಿಯಾ, ಜಪಾನ್ ಮತ್ತು ಭಾರತಗಳೊಂದಿಗೆ ಸೇರಿ ಜಂಟಿ ಸಮರಾಭ್ಯಾಸಗಳನ್ನು ನಿರ್ವಹಿಸುವಂತೆ ಸೂಚಿಸಿದೆ.

ಭಾರತ ಪ್ರವಾಸಕ್ಕೆ ಆಗಮಿಸಿರುವ ಅಮೆರಿಕಾ ರಕ್ಷಣಾ ಸಚಿವ ಆಸ್ಟನ್ ಬಾಲ್ಡ್‌ವಿನ್ ಕಾರ್ಟರ್ ಗುರುವಾರ ಭಾರತದ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ರವರನ್ನು ಭೇಟಿಯಾದರು‌ ಈ ವೇಳೆ ಈ ವಿಷಯಗಳ ಕುರಿತು ಅಮೆರಿಕಾ ರಕ್ಷಣಾ ಸಚಿವರು ಪ್ರಸ್ತಾಪಿಸಿದರು.

ಭಾರೀ ಪ್ರಮಾಣದಲ್ಲಿ ಭಾರತಕ್ಕೆ ರಕ್ಷಣಾ ತಂತ್ರಜ್ಞಾನವನ್ನು, ಸೇನಾ ಉಪಕರಣಗಳನ್ನು ರಫ್ತು ಮಾಡಲು ಅಮೆರಿಕಾ ಸರ್ಕಾರ ಲೈಸೆನ್ಸ್ ನಿಯಮಗಳನ್ನು ಅಂತಿಮಗೊಳಿಸಿದೆ ಎಂದು ಅವರು ಹೇಳಿದರು.

Loading...

Leave a Reply

Your email address will not be published.