Warning: preg_match(): Compilation failed: range out of order in character class at offset 33 in /home1/newsmg7m/public_html/wp-content/plugins/json-api/singletons/api.php on line 294
ಭಾರತದ ಶಕ್ತಿ ಏನೆಂದು ನಮಗೆ ಗೊತ್ತು : ಅಮೆರಿಕಾ – News Mirchi

ಭಾರತದ ಶಕ್ತಿ ಏನೆಂದು ನಮಗೆ ಗೊತ್ತು : ಅಮೆರಿಕಾ

ಪ್ರಪಂಚದಲ್ಲಿ ‘ಒಳ್ಳೆಯದಕ್ಕಾಗಿ ಶ್ರಮಿಸುವ ಶಕ್ತಿ’ ಭಾರತ, ಅಂತಹ ದೇಶದೊಂದಿಗೆ ಉತ್ತಮ ಸಂಬಂಧ ನಮಗೆ ತುಂಬಾ ಮಹತ್ವವಾದದ್ದು ಎಂದು ಅಮೆರಿಕಾ ಸ್ಪಷ್ಟಪಡಿಸಿದೆ. ಪ್ರಧಾನಿ ನರೇಂದ್ರ ಮೋದಿ ಅಮೆರಿಕಾ ಪ್ರವಾಸ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕಾ ಈ ಹೇಳಿಕೆ ನೀಡಿದೆ.

ಡೊನಾಲ್ಡ್ ಟ್ರಂಪ್ ಸರ್ಕಾರ ಭಾರತವನ್ನು ಕಡೆಗಣಿಸುತ್ತಿದೆ, ಮೋದಿ ಸರ್ಕಾರದ ಕಡೆ ಹೆಚ್ಚು ಗಮನ ಹರಿಸುತ್ತಿಲ್ಲ ಎಂದು ಬರುತ್ತಿರುವ ಸುದ್ದಿಗಳಲ್ಲಿ ಸತ್ಯವಿಲ್ಲ. ಭಾರತವೆಂದರೆ ಅಮೆರಿಕಕ್ಕೆ ವಿಶೇಷವಾದ ಗೌರವವಿದೆ. ಸೋಮವಾರ ನಡೆಯಲಿರುವ ಮೋದಿ-ಟ್ರಂಪ್ ಭೇಟಿಯಲ್ಲಿ ಇದು ನಿಮಗೆ ಕಾಣಿಸುತ್ತದೆ ಎಂದು ಶ್ವೇತಭವನದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಟ್ರಂಪ್ ಅಧಿಕಾರಕ್ಕೆ ಬಂದ ನಂತರ ಚೀನಾವನ್ನು ಬೆಂಬಲಿಸಿ ಮಾತನಾಡುತ್ತಿರುವುದು ಭಾರತದೊಂದಿಗಿನ ಸಂಬಂಧ ಹಳಸುತ್ತದೆ ಎಂದು ಬರುತ್ತಿರುವ ಸುದ್ದಿಗಳನ್ನು ಕೂಡಾ ಅವರು ಖಂಡಿಸಿದರು. ಟ್ರಂಪ್ – ಮೋದಿ ನಡುವೆ ಹಲವು ಬಾರಿ ಹಾಟ್ಲೈನ್ ಸಂಭಾಷಣೆ ನಡೆದಿದೆ, ಉಭಯ ದೇಶಗಳ ಉತ್ತಮ ಸಂಬಂಧಗಳಿಗಾಗಿಯೇ ಟ್ರಂಪ್ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿದ್ದಾರೆ. [ ಪೋರ್ಚುಗಲ್ ಭಾರತ ನಡುವೆ 11 ಒಪ್ಪಂದಗಳು ]

ಮೋದಿ – ಟ್ರಂಪ್ ಭೇಟಿಯಲ್ಲಿ ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆಯಲಿದೆ ಎಂದು ಶ್ವೇತಭವನ ಪ್ರೆಸ್ ಸೆಕ್ರಟರಿ ಸೀನ್ ಸ್ಪೈಸರ್ ಹೇಳಿದ್ದಾರೆ. ಪ್ರಸ್ತುತ ಉಭಯ ದೇಶಗಳ ನಡುವೆ ಇರುವ ಸಹಕಾರ, ಭಯೋತ್ಪಾದಕ ವಿರೋಧಿ ಕಾರ್ಯಕ್ರಮಗಳು, ರಕ್ಷಣಾ ಕ್ಷೇತ್ರದಲ್ಲಿ ಪಾಲುದಾರಿಗೆ, ಇಂಡೋ-ಫೆಸಿಫಿಕ್ ಪ್ರದೇಶಗಳು ಸೇರಿದಂತೆ ಅಂತರಾಷ್ಟ್ರೀಯ ಮಟ್ಟದಲ್ಲಿ ಸಹಕಾರ ಕುರಿತಂತೆ ಇವರಿಬ್ಬರೂ ಚರ್ಚಿಸುತ್ತಾರೆ ಎಂದು ಸ್ಪೈಸರ್ ಹೇಳಿದ್ದಾರೆ.

ಅಮೆರಿಕಾ ಅಧ್ಯಕ್ಷರಾಗಿ ಟ್ರಂಪ್ ಆಯ್ಕೆಯಾದ ನಂತರ ಶ್ವೇತಭವನದ ಔತಣಕೂಟ ಸ್ವೀಕರಿಸಲಿರುವ ಪ್ರಥಮ ವ್ಯಕ್ತಿ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರಾಗಲಿರುವುದು ಮತ್ತೊಂದು ವಿಶೇಷ. ಅದಕ್ಕಾಗಿಯೇ ಅಮೆರಿಕಕ್ಕೆ ಭಾರತ ವಿಶೇಷವೆಂದು ಸ್ಪೈಸರ್ ಹೇಳಿದ್ದಾರೆ. ಸೋಮವಾರ ಮಧ್ಯಾಹ್ನ ಉಭಯ ದೇಶಗಳ ನಾಯಕರು ಭೇಟಿಯಾದ ನಂತರ ತಮ್ಮ ತಮ್ಮ ತಂಡಗಳೊಂದಿಎ ಮತ್ತೊಮ್ಮೆ ಭೇಟಿಯಾಗುತ್ತಾರೆ. ಜಂಟಿ ಪತ್ರಿಕಾಗೋಷ್ಟಿ ನಂತರ ಔತಣಕೂಟದಲ್ಲಿ ಇವರೆಲ್ಲಾ ಪಾಲ್ಗೊಳ್ಳುತ್ತಾರೆ.

Contact for any Electrical Works across Bengaluru

Loading...
error: Content is protected !!