ಪಾಕ್ ಗೆ ಮತ್ತೊಂದು ಶಾಕ್ ನೀಡಿದ ಅಮೆರಿಕಾ, ಎಲ್ಲಾ ರೀತಿಯ ಸೇನಾ ಸಹಕಾರ ಸ್ಥಗಿತ |News Mirchi

ಪಾಕ್ ಗೆ ಮತ್ತೊಂದು ಶಾಕ್ ನೀಡಿದ ಅಮೆರಿಕಾ, ಎಲ್ಲಾ ರೀತಿಯ ಸೇನಾ ಸಹಕಾರ ಸ್ಥಗಿತ

ಮತ್ತೊಮ್ಮೆ ಪಾಕಿಸ್ತಾನಕ್ಕೆ ಅಮೆರಿಕಾ ಬಹುದೊಡ್ಡ ಶಾಕ್ ನೀಡಿದೆ. ಪಾಕಿಸ್ತಾನಕ್ಕೆ ನೀಡುತ್ತಿದ್ದ ಎಲ್ಲಾ ರೀತಿಯ ರಕ್ಷಣಾ ನೆರವನ್ನು ನಿಲ್ಲಿಸಿರುವುದಾಗಿ ಅಮೆರಿಕಾ ಹೇಳಿದೆ. ಆಫ್ಘನಿಸ್ತಾನದ ತಾಲಿಬಾನ್ ಮತ್ತು ಹಕ್ಕಾನಿ ನೆಟ್ವರ್ಕ್ ಸೇರಿದಂತೆ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಪಾಕ್ ನಿರ್ಣಾಯಕ ಕ್ರಮ ಕೈಗೊಳ್ಳುವವರೆಗೂ ಸೇನಾ ನೆರವುಗಳನ್ನು ರದ್ದುಗೊಳಿಸುತ್ತಿರುವುದಾಗಿ ಅಮೆರಿಕಾ ಪ್ರಕಟಿಸಿದೆ.

ಉಗ್ರರ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯಿಸಿ, ಪಾಕ್ ನೊಂದಿಗೆ ಉನ್ನತ ಮಟ್ಟದ ಮಾತುಕತೆ ನಡೆಸಿದ ನಂತರವೂ ತಾಲಿಬಾನ್ ಮತ್ತು ಹಖ್ಖಾನಿ ನೆಟ್ವರ್ಕ್ ಉಗ್ರರು ಅಫ್ಘನಿಸ್ತಾನವನ್ನು ಅಸ್ಥಿರಗೊಳಿಸಲು ಮತ್ತು ಅಮೆರಿಕಾ ಮೈತ್ರಿಪಡೆಗಳ ಮೇಲೆ ದಾಳಿ ನಡೆಸುವ ಸಂಚು ನಡೆಸಲು ಪಾಕಿಸ್ತಾನದಲ್ಲಿ ಆಶ್ರಯ ಕಂಡುಕೊಂಡಿವೆ ಎಂದು ಅಮೆರಿಕಾ ವಕ್ತಾರೆ ಹೆದರ್ ನುವರ್ಟ್ ಹೇಳಿದ್ದಾರೆ.

ಭಾರತೀಯ ಪಡೆಗಳ ಪ್ರಬಲ ಪ್ರತೀಕಾರದ ದಾಳಿ, ಮೂರು ಪಾಕ್ ಪೋಸ್ಟ್ ಗಳು ಧ್ವಂಸ

ಈಗಾಗಲೇ ಅಮೆರಿಕದಿಂದ ಪಡೆಯಲಿದ್ದ 225 ಮಿಲಿಯನ್ ಡಾಲರ್ ನೆರವನ್ನು ಕಳೆದುಕೊಂಡಿರುವ ಪಾಕ್, ಈಗ 1 ಶತಕೋಟಿ ಡಾಲರ್ ಮೌಲ್ಯದ ನೆರವಿನಿಂದ ವಂಚಿತಗೊಂಡಂತಾಗುತ್ತದೆ.

ಅಮೆರಿಕದ ನಿರ್ಧಾರದಿಂದ ಪಾಕ್ ಇನ್ನು ಮುಂದೆ ಯಾವುದೇ ಮಿಲಿಟರಿ ಉಪಕರಣಗಳಾಗಲೀ, ಮಿಲಿಟರಿ ಆರ್ಥಿಕ ನೆರವನ್ನಾಗಲೀ ಅಮೆರಿಕದಿಂದ ಪಡೆಯಲು ಸಾಧ್ಯವಿಲ್ಲ. ಕೇವಲ ರಾಷ್ಟ್ರೀಯ ಭದ್ರತಾ ಹಿತಾಸಕ್ತಿಗಳಿಗೆ ಸಂಬಂಧಿಸಿದ ಗಂಭೀರ ವಿಷಯಗಳಲ್ಲಿ ಮಾತ್ರ ಕೆಲವು ವಿನಾಯಿತಿಗಳಿರಬಹುದು ಎಂದು ನುವರ್ಟ್ ಹೇಳಿದ್ದಾರೆ.

Get Latest updates on WhatsApp. Send ‘Subscribe’ to 8550851559

Loading...
loading...
error: Content is protected !!