ಇಲ್ಲಿಗೆ ಟ್ರಿಪ್ ಹೋದರೆ ಹಣವೂ ಸಿಗುತ್ತೆ! – News Mirchi

ಇಲ್ಲಿಗೆ ಟ್ರಿಪ್ ಹೋದರೆ ಹಣವೂ ಸಿಗುತ್ತೆ!

ಅಮೆರಿಕದ ವರ್ಜಿನ್ ದ್ವೀಪಗಳ ಸೌಂದರ್ಯವನ್ನು ಸವಿಯಲು ಬಯಸುವ ವಿಹಾರಿಗಳಿಗೆ ಈ ವರ್ಷ ಬೋನಸ್ ಎಂಬಂತೆ ಹಣವೂ ಸಿಗಲಿದೆ, ಇದಲ್ಲವೇ ಆಫರ್ ಅಂದರೆ.

ರಜೆಯ ಮಜಾ ಅನುಭವಿಸಲು 2017 ರಲ್ಲಿ ಇಲ್ಲಿಗೆ ಭೇಟಿ ನೀಡಿದರೆ 300 ಡಾಲರ್ ಗಳನ್ನು ವೋಚರ್ ರೂಪದಲ್ಲಿ ಸರ್ಕಾರ ನೀಡುತ್ತದೆ. ಮೂರು ದಿನಗಳಿಗಿಂತಲೂ ಹೆಚ್ಚು ದಿನ ಇಲ್ಲಿ ಕಳೆಯುವವರಿಗೆ ಈ ಕೊಡುಗೆ ಅನ್ವಯವಾಗುತ್ತದೆ. ಯಾತ್ರೆಯನ್ನು ಅಧಿಕೃತ ಟೂರಿಸಂ ವೆಬ್ಸೈಟ್ www.visitusvi.com ಮೂಲಕ ಬುಕ್ ಮಾಡಬೇಕಿರುತ್ತದೆ. ಈ ವೋಚರ್ ಅನ್ನು ಆಯ್ದ ಹೋಟೆಲುಗಳು ಅಯೋಜಿಸುವ ಐತಿಹಾಸಿಕ / ಸಾಂಸ್ಕೃತಿಕ ಯಾತ್ರೆ ಮತ್ತು ಚಟುವಟಿಕೆಗಳಿಗೆ ಬಳಸಿಕೊಳ್ಳಬಹುದು.

ಈ ಕೊಡುಗೆ ನೀಡಲು ಕಾರಣವೊಂದಿದೆ. ಅದೇನೆಂದರೆ 25 ಮಿಲಿಯನ್ ಡಾಲರ್ ಗಳ ಮೊತ್ತಕ್ಕೆ ಡೆನ್ಮಾರ್ಕ್ ದೇಶವು ಈ ವರ್ಜಿನ್ ದ್ವೀಪಗಳನ್ನು ಅಮೆರಿಕಕ್ಕೆ ವರ್ಗಾಯಿಸಿ 100 ವರ್ಷಗಳಾಗಿವೆ. ಹೀಗಾಗಿ ಈ ವರ್ಷದಲ್ಲಿ ಯಾವ ಸಮಯದಲ್ಲಾದರೂ ಸರಿ, ಇಲ್ಲಿಗೆ ಯಾತ್ರೆ ಕೈಗೊಂಡರೆ ಈ ಆಕರ್ಷಕ ಆಫರ್ ನ ಲಾಭ ಪಡೆಯಬಹುದು.

To mark 100 years since it was transferred from Denmark to the US, the US Virgin Islands will be giving visitors $US300 vouchers.

Loading...

Leave a Reply

Your email address will not be published.