ಹೇಳಿದಂತೆಯೇ ಮಾಡಿದ ಡೊನಾಲ್ಡ್ ಟ್ರಂಪ್, ಅಫ್ಘನಿಸ್ತಾನಕ್ಕೆ ಮತ್ತಷ್ಟು ಸೈನಿಕರು – News Mirchi

ಹೇಳಿದಂತೆಯೇ ಮಾಡಿದ ಡೊನಾಲ್ಡ್ ಟ್ರಂಪ್, ಅಫ್ಘನಿಸ್ತಾನಕ್ಕೆ ಮತ್ತಷ್ಟು ಸೈನಿಕರು

ಅಫ್ಘನಿಸ್ತಾನದಿಂದ ತನ್ನ ಮಿಲಿಟರಿ ಪಡೆಗಳನ್ನು ಹಿಂತೆಗೆದುಕೊಳ್ಳುವುದಿಲ್ಲ ಎಂದು ಕಳೆದ ತಿಂಗಳು ಸ್ಪಷ್ಟಪಡಿಸಿದ್ದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಮತ್ತಷ್ಟು ಸೈನಿಕರನ್ನು ಅಪ್ಘನಿಸ್ತಾನಕ್ಕೆ ಕಳುಹಿಸುವ ತೀರ್ಮಾನ ಕೈಗೊಂಡಿದ್ದಾರೆ. ಈಗಾಗಲೇ ಅಲ್ಲಿರುವ ಅಮೆರಿಕದ 14,500 ಸೈನಿಕರ ಜೊತೆಗೆ ಇನ್ನೂ 4,000 ಸೈನಿಕರನ್ನು ಕಳುಹಿಸುತ್ತಿರುವುದಾಗಿ ರಕ್ಷಣಾ ಸಚಿವಾಲಯದ ಕಾರ್ಯದರ್ಶಿ ಜೇಮ್ಸ್ ಮ್ಯಾಟಿಸ್ ಹೇಳಿದ್ದಾರೆ.

ಈಗ 3,500 ಸೈನಿಕರನ್ನು ಕಳುಹಿಸುತ್ತಿದ್ದು, ಮುಂದೆ ಇನ್ನೂ ಎಷ್ಟು ಸೈನಿಕರನ್ನು ಕಳುಹಿಸುತ್ತಾರೆ ಎಂಬ ವಿಷಯವನ್ನು ಮಾತ್ರ ಅವರು ಬಹಿರಂಗಪಡಿಸಲಿಲ್ಲ. ಅಮೆರಿಕಾ ಹಿತಾಸಕ್ತಿಗಳಿಗೆ ಅನುಗುಣವಾಗಿ ಪಡೆಗಳ ನಿಯೋಜನೆ ಇರುತ್ತದೆ ಎಂದು ಮ್ಯಾಟಿಸ್ ಸ್ಪಷ್ಟಪಡಿಸಿದ್ದಾರೆ. ತಾಲಿಬಾನಿಗಳ ಹೋರಾಟವನ್ನು ಹತ್ತಿಕ್ಕಲು ಇನ್ನೂ ಹೆಚ್ಚು ಸೈನಿಕರ ಅಗತ್ಯವಿದೆ ಎಂದು ಹಿರಿಯ ಸೇನಾಧಿಕಾರಿಗಳು ಅಭಿಪ್ರಾಯಪಟ್ಟ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಹೆಚ್ಚುವರಿ ಪಡೆಗಳು ಅಫ್ಘನಿಸ್ತಾನ ಸೇನೆಗೆ ಉಗ್ರಗಾಮಿಗಳ ವಿರುದ್ಧ ಹೋರಾಡುವು ವಿಷಯದಲ್ಲಿ ತರಬೇತಿ ಮತ್ತು ಸಲಹೆಗಳನ್ನು ನೀಡಲಿದೆ ಎಂದು ಹೇಳಲಾಗಿದೆ.

ಉಗ್ರಗಾಮಿ ಸಂಘಟನೆಗಳು ಅಫ್ಘನಿಸ್ತಾನವನ್ನು ತರಬೇತಿ ಕೇಂದ್ರವಾಗಿ, ದಾಳಿಗಳ ಕೇಂದ್ರವನ್ನಾಗಿ ಮಾಡುವ ಯತ್ನಗಳನ್ನು ನಾವು ತಡೆಯುತ್ತೇವೆ ಎಂದು ಹೇಳಿದ್ದಾರೆ. ಅಲ್ಲಿಂದ ಪಡೆಗಳನ್ನು ವಾಪಸು ಕರೆಸಿಕೊಳ್ಳು ಅಂಶ ಸದ್ಯ ಪರಿಗಣನೆಯಲ್ಲಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ದೀರ್ಘಕಾಲೀನ ಪ್ರಯೋಜನಗಳನ್ನು ಗಮನದಲ್ಲಿಟ್ಟುಕೊಂಡು ಸೈನಿಕರ ಸಂಖ್ಯೆಯನ್ನು ಹೆಚ್ಚಳ ಮಾಡಿದ್ದಾಗಿ ವಿವರಿಸಿದರು. ಈ ಸೈನಿಕರಿಗೆ ಅಗತ್ಯವಾದ ನಿಧಿಗಳನ್ನು ಮಂಜೂರು ಮಾಡಲು ಇದೇ ತಿಂಗಳ 13 ರಂದು ಕಾಂಗ್ರೆಸ್ ಸಭೆ ಸೇರುತ್ತದೆ ಎಂದು ಹೇಳಿದರು.

ನಿಮ್ಮ ಮೊಬೈಲ್ ನಲ್ಲಿ ನ್ಯೂಸ್ ಅಪ್ಡೇಟ್ಸ್ ಗಾಗಿ “ADD ME” ಎಂದು ನಿಮ್ಮ ಹೆಸರಿನ ಜೊತೆ 8550851559 ಗೆ ವಾಟ್ಸಾಪ್ ಮಾಡಿ

Loading...