ಉತ್ತರಖಂಡ ಬಿಜೆಪಿಯಿಂದ 17 ಜನರ ಉಚ್ಚಾಟನೆ |News Mirchi

ಉತ್ತರಖಂಡ ಬಿಜೆಪಿಯಿಂದ 17 ಜನರ ಉಚ್ಚಾಟನೆ

ಉತ್ತರಾಖಂಡದಲ್ಲಿ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿರುವ ಸಂದರ್ಭದಲ್ಲಿ, ರಾಜ್ಯದ ಬಿಜೆಪಿ ತನ್ನ 17 ಸದಸ್ಯರನ್ನು ಪಕ್ಷದಿಂದ 6 ವರ್ಷಗಳ ಕಾಲ ಹೊರಹಾಕಿದೆ. ಪಕ್ಷದ ಅಭ್ಯರ್ಥಿಗಳ ವಿರುದ್ಧವೇ ಸ್ಪರ್ಧಿಸುತ್ತಿರುವುದರಿಂದ ಈ 17 ಜನರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ.

ಬಿಜೆಪಿ ಇತ್ತೀಚೆಗಷ್ಟೇ ಬಿಡುಗಡೆ ಮಾಡಿದ ಅಭ್ಯರ್ಥಿಗಳ ಪಟ್ಟಿಯಲ್ಲಿ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ 12 ಕಾಂಗ್ರೆಸ್ ಅಭ್ಯರ್ಥಿಗಳೂ ಇದ್ದಾರೆ. ಫೆಬ್ರವರಿ 15 ರಂದು ಒಂದೇ ಹಂತದಲ್ಲಿ ಉತ್ತರಖಂಡದಲ್ಲಿ ಚುನಾವಣೆ ನಡೆಯಲಿದ್ದು, ಮಾರ್ಚ್ 11 ರಂದು ಫಲಿತಾಂಶ ಹೊರಬೀಳಲಿದೆ.

English Summary: Ahead of the assembly polls in Uttarakhand, the Bharatiya Janata Party (BJP) on Monday expelled 17 members from the party for six years for contesting elections against their own party candidates.

Loading...
loading...
error: Content is protected !!