ಚೆನ್ನೈನಲ್ಲಿ ಭೀಕರ ವರ್ಧಾ ಚಂಡಮಾರುತ

ವಾರ್ಧಾ ಚಂಡಮಾರುತದ ತೀವ್ರತೆ ಚೆನ್ನೈ ನಗರವನ್ನು ನಡುಗಿಸುತ್ತಿದೆ. ಗಂಟೆಗೆ 140 ಕಿ.ಮೀ ವೇಗದಲ್ಲಿ ಬೀಸುತ್ತಿರುವ ಗಾಳಿಗೆ ದೊಡ್ಡ ದೊಡ್ಡ ಮರಗಳೇ ಧರೆಗುರುಳಿವೆ. ಚಂಡಮಾರುತದ ಪ್ರಭಾವ ಸುಮಾರು ನಾಲ್ಕು ಗಂಟೆಗಳ ಕಾಲ ನಗರದ ಮೇಲೆ ಇರಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಭಾರೀ ಮಳೆಯ ಕಾರಣ ಹಲವು ಪ್ರದೇಶಗಳು ಜಲಾವೃತವಾಗಿವೆ. ಸರ್ದಾರ್ ಪಟೇಲ್ ರಸ್ತೆಯಲ್ಲಿ ಅನೇಕ ಕಡೆ ಮರಗಳು ನೆಲಕ್ಕುರುಳಿವೆ. ವಿಮಾನ ನಿಲ್ದಾಣಕ್ಕೆ ತೆರಳುವ ಮಾರ್ಗಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಮುಚ್ಚಲಾಗಿದೆ.

ಜೋರು ಗಾಳಿಗೆ ವಿದ್ಯುತ್ ಸ್ಥಂಭಗಳು, ಗಿಡಮರಗಳು ಉರಳಿ ಬಿದ್ದಿದ್ದು, ನೆಲಕ್ಕುರುಳಿದ ಮರಗಿಡಗಳನ್ನು ಪಕ್ಖ್ಕೆ ಸರಿಸಿ ರಸ್ತೆ ಸಂಚಾರಕ್ಕೆ ಅನುಕೂಲ ಮಾಡುತ್ತಿದೆ ಅಲ್ಲಿನ ಮಹಾನಗರ ಪಾಲಿಕೆ.

Loading...

Leave a Reply

Your email address will not be published.

error: Content is protected !!