ಪರೀಕ್ಷೆಯಲ್ಲಿ ಟಾಪ್, ಆರಿಸಿಕೊಂಡಿದ್ದು ಸನ್ಯಾಸತ್ವ! – News Mirchi

ಪರೀಕ್ಷೆಯಲ್ಲಿ ಟಾಪ್, ಆರಿಸಿಕೊಂಡಿದ್ದು ಸನ್ಯಾಸತ್ವ!

ಸಾಮಾನ್ಯವಾಗಿ ಪರೀಕ್ಷೆಯಲ್ಲಿ ಟಾಪ್ ರ್ಯಾಂಕ್ ಪಡೆಯುವ ವಿದ್ಯಾರ್ಥಿಗಳು, ಉನ್ನತ ವ್ಯಾಸಂಗಕ್ಕಾಗಿ ದೊಡ್ಡ ದೊಡ್ಡ ಕಾಲೇಜುಗಳಲ್ಲಿ ಸೇರಲು ಪ್ರಯತ್ನಿಸುತ್ತಾರೆ. ಆದರೆ ಇತ್ತೀಚೆಗೆ ನಡೆದ 12ನೇ ತರಗತಿ ಪರೀಕ್ಷೆಯಲ್ಲಿ ಶೇ.99.99 ಅಂಕಗಳಿಂದ ತೇರ್ಗಡೆಯಾದ ಗುಜರಾತಿನ 17 ವರ್ಷದ ವಿದ್ಯಾರ್ಥಿ ವರ್ಷಿಲ್ ಶಾ , ವಿಭಿನ್ನ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದು ಆಶ್ಚರ್ಯ ಮೂಡಿಸಿದ್ದಾನೆ.

ಮುಂದಿನ ವಿದ್ಯಾಭ್ಯಾಸಕ್ಕೆ ತಿಲಾಂಜಲಿ ಇಟ್ಟು, ವರ್ಷಿಲ್ ಶಾ ಸನ್ಯಾಸ ದೀಕ್ಷೆ ಪಡೆದಿದ್ದಾನೆ. ಕಲ್ಯಾಣ್ ಮಹಾರಾಜ್ ಎಂಬ ಜೈನ ಸನ್ಯಾಸಿಯನ್ನು ಸ್ಪೂರ್ತಿಯಾಗಿ ತೆಗೆದುಕೊಂಡಿರುವ ವರ್ಷಿಲ್ ಶಾ, ಸನ್ಯಾಸತ್ವ ಸ್ವೀಕರಿಸಲು ತೀರ್ಮಾನಿಸಿದ್ದಾಗಿ ತಿಳಿದುಬಂದಿದೆ. ಮತ್ತೊಂದು ವಿಶೇಷವೆಂದರೆ, ಈ ಬಾಲಕನ ಕುಟುಂಬದವರೂ ಕೂಡಾ ಪರಮ ಅಹಿಂಸವಾದಿಗಳು.

ವಿದ್ಯುತ್ ತಯಾರಿಕೆಯ ಪ್ರಕ್ರಿಯೆಯಲ್ಲಿ ಜಲಚರಗಳು ಸಾವನ್ನಪ್ಪುತ್ತವೆ ಎಂಬ ಕಾರಣಕ್ಕಾಗಿ, ವಿದ್ಯುತ್ ಬಳಕೆಯನ್ನು ಬಾಲಕನ ಕುಟುಂಬ ತುಂಬಾ ಕಡಿಮೆ ಮಾಡಿಬಿಟ್ಟಿದೆ. ಇದರಿಂದಾಗಿ ಅವರ ಮನೆಯಲ್ಲಿ ಟಿವಿ, ಫ್ರಿಡ್ಜ್ ಮುಂತಾದ ವಿದ್ಯುತ್ ನಿಂದ ಕೆಲಸ ಮಾಡುವ ಉಪಕರಣಗಳೇ ಇಲ್ಲ. ಬುದ್ದಿವಂತೆಯಾದ ಬಾಲಕನ ಅಕ್ಕ ಸಹಾ ಚಾರ್ಟರ್ಡ್ ಅಕೌಂಟೆನ್ಸಿ ಯನ್ನು ಮಧ್ಯದಲ್ಲಿಯೇ ಬಿಟ್ಟುಬಿಟ್ಟಿದ್ದಾರೆ. ಅವರ ಕುಟುಂಬಕ್ಕೆ ಮೊದಲನಿಂದಲೂ ಆಧ್ಯಾತ್ಮದೆಡೆ ಒಲವು ಹೆಚ್ಚು ಎನ್ನಲಾಗುತ್ತಿದೆ.

Loading...