ಉತ್ತರ ಪ್ರದೇಶದ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ವರುಣ್ ಗಾಂಧಿಗೆ ಸ್ಥಾನ – News Mirchi
We are updating the website...

ಉತ್ತರ ಪ್ರದೇಶದ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ವರುಣ್ ಗಾಂಧಿಗೆ ಸ್ಥಾನ

ಆರಂಭದಲ್ಲಿ ಉತ್ತರಪ್ರದೇಶ ಚುನಾವಣಾ ಪ್ರಚಾರದಲ್ಲಿ ಸ್ಟಾರ್ ಪ್ರಚಾರಕರ ಪ‌ಟ್ಟಿಯಿಂದ ವರುಣ್ ಗಾಂಧಿಯವರನ್ನು ಕೈಬಿಟ್ಟಿದ್ದ ಬಿಜೆಪಿ, 3 ಮತ್ತು 4 ನೇ ಹಂತದ ಮತದಾನದ ಪ್ರಚಾರದ ಪಟ್ಟಿಯಲ್ಲಿ ಗುರುವಾರ ವರುಣ್ ಗಾಂಧಿಗೆ ಸ್ಥಾನ ಕಲ್ಪಿಸಿದೆ. 40 ಜನರ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಸುಲ್ತಾನ್ ಪುರದ ಸಂಸದ ವರುಣ್ ಗಾಂಧಿ 39 ನೆಯವರಾಗಿದ್ದಾರೆ.

ಫೈರ್ ಬ್ರ್ಯಾಂಡ್ ಎಂದೇ ಹೆಸರುವಾಸಿಯಾಗಿರುವ ವರುಣ್ ಗಾಂಧಿಯನ್ನು, ಅಮಿತ್ ಷಾ ಪಕ್ಷದ ರಾಷ್ಟ್ರಾಧ್ಯಕ್ಷರಾದ ನಂತರ ಕಡೆಗಣಿಸಿದ್ದರು.

40 ಜನರ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಉಮಾಭಾರತಿ, ಅರುಣ್ ಜೇಟ್ಲಿ, ಎಂ.ವೆಂಕಯ್ಯನಾಯ್ಡು, ಸ್ಮೃತಿ ಇರಾನಿ, ಪಿಯೂಷ್ ಗೋಯೆಲ್, ವಿಕೆ ಸಿಂಗ್, ಮುಕ್ತಾರ್ ಅಬ್ಬಾಸ್ ನಖ್ವಿ ಮತ್ತು ನಿತಿನ್ ಗಡ್ಕರಿಯವರು ಪ್ರಮುಖರು.

ಹಿರಿಯ ನಟಿ ಹೇಮಾ ಮಾಲಿನಿ, ದೆಹಲಿ ಬಿಜೆಪಿ ಮುಖ್ಯಸ್ಥ ಮನೋಜ್ ತಿವಾರಿ, ಹಾಸ್ಯ ನಟ ರಾಜು ಶ್ರೀವಾತ್ಸವ, ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ ಸಿಂಧಿಯಾ, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ರವರೂ ಪ್ರಚಾರದ ಹೊಣೆ ಹೊತ್ತಿದ್ದಾರೆ.

English Summary: After initially dropping Varun Gandhi from the list of “star campaigners” in Uttar Pradesh, the BJP on Thursday included his name for the third and fourth phases of polling in the state, a party official said.

Contact for any Electrical Works across Bengaluru

Loading...

Leave a Reply

Your email address will not be published.

error: Content is protected !!