ಮೊದಲ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಎಂದ ಪ್ರಧಾನಿ – News Mirchi

ಮೊದಲ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಎಂದ ಪ್ರಧಾನಿ

ಭಾರತದ 13ನೇ ಉಪರಾಷ್ಟ್ರಪತಿ ಹುದ್ದೆಗೇರಿದ ಎಂ.ವೆಂಕಯ್ಯನಾಯ್ಡು ಅಪರೂಪದ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಜನಿಸಿದವರಲ್ಲಿ ಉಪರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸಿದವರಲ್ಲಿ ವೆಂಕಯ್ಯನಾಯ್ಡು ಅವರೇ ಮೊದಲಿಗರಾಗಿದ್ದಾರೆ.

ಈ ವಿಷಯವನ್ನು ಹೇಳಿದ್ದು ಬೇರಾರೂ ಅಲ್ಲ, ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ರಾಜ್ಯಸಭೆಯಲ್ಲಿ ಈ ವಿಷಯವನ್ನು ಹೇಳಿದರು. ಮೋದಿ ಮಾತಿಗೆ ಸದಸ್ಯರೆಲ್ಲಾ ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದರು. ವೆಂಕಯ್ಯನಾಯ್ಡು 1949 ಜುಲೈ 1 ರಂದು ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಚವಟಪಾಲೆಂ ನಲ್ಲಿ ಜನಿಸಿದರು.

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಶುಕ್ರವಾರ ಬೆಳಗ್ಗೆ ರಾಷ್ಟ್ರಪತಿ ಭವನದ ದರ್ಬಾರ್ ಹಾಲ್ ನಲ್ಲಿ ವೆಂಕಯ್ಯನಾಯ್ಡುರವರಿಗೆ ಉಪರಾಷ್ಟ್ರಪತಿಯಾಗಿ ಪ್ರತಿಜ್ಞಾ ವಿಧಿ ಭೋದಿಸಿದ ನಂತರ ನೇರವಾಗಿ ರಾಜ್ಯಸಭೆಗೆ ತೆರಳಿದ ವೆಂಕಯ್ಯನಾಯ್ಡು, ಅಧ್ಯಕ್ಷರ ಆಸನದ ಮೇಲೆ ಕೂತು ಕಲಾಪ ನಡೆಸಿದರು. ಹೊಸ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ರವರನ್ನು ಪ್ರಧಾನಿ ಮೋದಿ, ಪ್ರತಿಪಕ್ಷ ನಾಯಕ ಗುಲಾಂ ನಬೀ ಆಜಾದ್ ಮುಂತಾದವರು ಅಭಿನಂದಿಸಿದರು.

ರಾಜ್ಯಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡುತ್ತಾ, ಸ್ವಾತಂತ್ರ್ಯ ಬಂದ ನಂತರ ಜನ್ಮಿಸಿದವರಲ್ಲಿ ಉಪರಾಷ್ಟ್ರಪತಿಯಾದ ಮೊಟ್ಟ ಮೊದಲ ವ್ಯಕ್ತಿ ವೆಂಕಯ್ಯನಾಯ್ಡು ಅವರು. ಇದೊಂದು ಅಪರೂಪದ ಕ್ಷಣ. ಕೇಂದ್ರ ಸಚಿವರಾಗಿ ಅವರು ದೇಶಕ್ಕೆ ಸಾಕಷ್ಟು ಸೇವೆ ಮಾಡಿದ್ದಾರೆ. ಪ್ರಧಾನಮಂತ್ರಿ ಗ್ರಾಮ್ ಸಡಕ್ ಯೋಜನೆ ಯಶಸ್ಸಿಗೆ ನಾವು ಯಾರನ್ನಾದರು ಅಭಿನಂದಿಸಬೇಕು ಎಂದಿದ್ದರೆ ಅದು ವೆಂಕಯ್ಯನಾಯ್ಡು ಅವರನ್ನು ಮಾತ್ರ ಎಂದು ಮೋದಿ ಹೇಳಿದರು.

Loading...