ಅಮಿತ್ ಶಾ ತಂತ್ರವಲ್ಲ, ಮೋದಿಯ ಸೂಚನೆಯಂತೆ ನಾನು ಒಪ್ಪಿಕೊಂಡೆ – News Mirchi

ಅಮಿತ್ ಶಾ ತಂತ್ರವಲ್ಲ, ಮೋದಿಯ ಸೂಚನೆಯಂತೆ ನಾನು ಒಪ್ಪಿಕೊಂಡೆ

ಬಿಜೆಪಿಯಿಂದ ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ತಮ್ಮನ್ನು ಆಯ್ಕೆ ಮಾಡಿದ ನಂತರ ಮಾಧ್ಯಮಗಳಲ್ಲಿ ಬರುತ್ತಿರುವ ವದಂತಿಗಳಿಗೆ ವೆಂಕಯ್ಯನಾಯ್ಡು ತೆರೆ ಎಳೆದಿದ್ದಾರೆ. ತಮ್ಮನ್ನು ಸಕ್ರಿಯ ರಾಜಕಾರಣದಿಂದ ತಪ್ಪಿಸಲು ಅಮಿತ್ ಶಾ ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದಾರೆ ಎಂಬ ಸುದ್ದಿಗಳನ್ನು ಅಲ್ಲಗೆಳೆದ ಅವರು, ಹಾಗೆ ಅರ್ಥ ಕಲ್ಪಿಸುವುದು ಮೂರ್ಖತನ, ಪ್ರಧಾನಿ ನರೇಂದ್ರ ಮೋದಿಯವರೆ ಸೂಚನೆಯ ಮೇರೆಗೆ, ಅದರಿಂದಾಗುವ ಪ್ರಯೋಜನಗಳನ್ನು ಗಮನದಲ್ಲಿಟ್ಟುಕೊಂಡೇ ಉಪರಾಷ್ಟ್ರಪತಿ ಅಭ್ಯರ್ತಿಯಾಗಲು ಒಪ್ಪಿಕೊಂಡಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದರು.

ನಾನು ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದಾಗಿನಿಂದಲೂ ಪತ್ರಿಕೆಗಳು, ಎಲೆಕ್ಟ್ರಾನಿಕ್ ಮೀಡಿಯಾ, ಸಾಮಾಜಿಕ ತಾಣಗಳಲ್ಲಿ ಮನಬಂದಂತೆ ಬರೆಯುತ್ತಿದ್ದಾರೆ. ನನಗೆ ಉಪರಾಷ್ಟ್ರಪತಿ ಹುದ್ದೆ ಮೇಲೆ ಆಸಕ್ತಿಯಿಲ್ಲವೆಂದು, ರಾಜಕಾರಣದಿಂದ ನನ್ನನ್ನು ತಪ್ಪಿಸಲೆಂದೇ ಈ ಆಯ್ಕೆ ಮಾಡಿದರೆಂದು ಬರೆದಿದ್ದಾರೆ. ನಾನು ಸಣ್ಣ ವಯಸ್ಸಿನಿಂದಲೂ ಸಚಿವನಾಗಿ ಕೆಲಸ ಮಾಡಿದ್ದೇನೆ. ರಾಜಕೀಯ ಜೀವನವನ್ನು ಆನಂದಿಸುತ್ತಲೇ ಸಂಪೂರ್ಣ ರಾಜಕೀಯ ಜೀವಿಯಾಗಿದ್ದಾನೆ. ಸ್ವಭಾವತಃ ಜನರ ನಡುವೆ ಇರುವುದು ನನಗಿಷ್ಟ, ಸ್ನೇಹಿರೊಂದಿಗೆ, ಪಕ್ಷದ ಕಾರ್ಯಕರ್ತರೊಂದಿಗೆ ಸೇರಿ ಸಿನಿಮಾ, ಹೋಟೆಲುಗಳಿಗೆ ಹೋಗುವುದು ಇಷ್ಟ. ಪ್ರೊಟೋಕಾಲ್ ನಂತಹ ಹುದ್ದೆಗಳಿಗೆ ಸ್ವಭಾವತಃ ವಿರೋಧಿ.

ಎನ್ಡಿಎ ಉಪರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯಲ್ಲಿ ಹಲವು ಹೆಸರುಗಳು ಪರಿಶೀಲನೆಗೆ ಬಂದವು. ಕೆಲವರ ಹೆಸರು ಸೂಚಿಸುವಂತೆ ನನ್ನನ್ನು ಕೇಳಿದಾಗ ನಾನೂ ಕೆಲವು ಹೆಸರುಗಳನ್ನು ಸೂಚಿಸಿದ್ದೆ. ಆದರೆ ಹಲವು ಹಿರಿಯರು ನಿಮ್ಮ ಹೆಸರೇ ಸೂಚಿಸುತ್ತಿದ್ದಾರೆ, ಹಾಗಾಗಿ ನೀವು ಒಪ್ಪಿಕೊಳ್ಳಬೇಕು ಎಂದು ಅಮಿತ್ ಶಾ ನನ್ನನ್ನು ಕೇಳಿದರು. ರಾಜಕೀಯ ಕಾರ್ಯಕರ್ತನಾದ್ದರಿಂದ ಸಾಂವಿಧಾನಿಕ ಹುದ್ದೆಗೆ ಸೂಕ್ತನಲ್ಲವೇನೋ ಎಂಬ ಅನುಮಾನವಿತ್ತು. ಆದರೆ ಅಮಿತ್ ಶಾ ಮನವೊಲಿಸಿದರು. ರಾಜ್ಯ ಸಭೆಯಲ್ಲಿ ಬಿಜೆಪಿ ಬಹುಮತವಿಲ್ಲದ ಪರಿಸ್ಥಿತಿಯಲ್ಲಿ ಈ ಹುದ್ದೆಗೆ ಅಭ್ಯರ್ಥಿಯಾಗಬೇಕು, ರಾಜಕೀಯವಾಗಿ ಅನುಭವವಿರುವ ನೀವೇ ಸರಿಯಾದ ಅಭ್ಯರ್ಥಿ ಎಂದಾಗ ಒಪ್ಪಿಕೊಂಡೆ. ನಂತರ ಮೋದಿಯವರೊಂದಿಗೆ ಚರ್ಚಿಸಿದೆ. ಅವರು ಸೂಚನೆಯಂತೆ ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಉಪರಾಷ್ಟ್ರಪತಿ ಅಭ್ಯರ್ಥಿಯಾಗಲು ಅಂಗೀಕರಿಸಿದ್ದೇನೆ ಎಂದು ವಿವರಿಸಿದರು.

ರಾಜಕಾರಣದಲ್ಲಿ 40 ವರ್ಷ ಸಕ್ರಿಯರಾಗಿದ್ದವರಿಗೆ ಸಾಂವಿಧಾನಿಕ ಹುದ್ದೆ ಕಡೆ ಹೋಗುವುದು ಯಾರಿಗಾದರ ಕಷ್ಟವೇ. ತುರ್ತು ಪರಿಸ್ಥಿತಿ ಸಮಯದಲ್ಲಿ ನಿಜವಾದ ರಾಜಕೀಯಗಳನ್ನು ಅರ್ಥ ಮಾಡಿಕೊಂಡೆ. ನನಗೆ ಪಕ್ಷ ಎಲ್ಲಾ ನಿಡಿದೆ. ನಾನು ತುಂಬಾ ಅದೃಷ್ಟವಂತ ಎಂದು ಹೇಳಿದರು.

Loading...