ಉಪರಾಷ್ಟ್ರಪತಿ ಚುನಾವಣೆಗೆ ಮತದಾನ ಶುರು, ಇಂದೇ ಫಲಿತಾಂಶ – News Mirchi

ಉಪರಾಷ್ಟ್ರಪತಿ ಚುನಾವಣೆಗೆ ಮತದಾನ ಶುರು, ಇಂದೇ ಫಲಿತಾಂಶ

ಎನ್.ಡಿ.ಎ ಅಭ್ಯರ್ಥಿ ಮತ್ತು ಮಾಜಿ ಕೇಂದ್ರ ಸಚಿವ ವೆಂಕಯ್ಯನಾಯ್ಡು ಮತ್ತು ಪ್ರತಿಪಕ್ಷಗಳ ಅಭ್ಯರ್ಥಿ ಗೋಪಾಲಕೃಷ್ಣ ಗಾಂಧಿಯವರು ಸ್ಪರ್ಧಿಸಿರುವ ಉಪರಾಷ್ಟ್ರಪತಿ ಚುನಾವಣೆ ಮತದಾನ ಆರಂಭವಾಗಿದೆ. ಇಂದು ಬೆಳಗ್ಗೆ 10 ಗಂಟೆಗೆ ಆರಂಭವಾದ ಮತದಾನ ಸಂಜೆ 5 ಗಂಟೆಯವರೆಗೆ ನಡೆಯಲಿದೆ. ಫಲಿತಾಂಶವು ಇಂದು ಸಂಜೆ 6:30 ಕ್ಕೆ ಹೊರಬೀಳಲಿದೆ.

ವೆಂಕಯ್ಯನಾಯ್ಡು ರವರಿಗೆ ಬಿಜೆಪಿ ನೇತೃತ್ವದ ಎನ್.ಡಿ.ಎ ಮೈತ್ರಿ ಪಕ್ಷಗಳು ಮಾತ್ರವಲ್ಲದೆ, ಎಐಎಡಿಎಂಕೆ, ಟಿ.ಆರ್.ಎಸ್, ವೈ.ಎಸ್.ಆರ್.ಪಿ ಬೆಂಬಲವಿದ್ದರೆ, ಗೋಪಾಲಕೃಷ್ಣ ಗಾಂಧಿಯವರಿಗೆ ಕಾಂಗ್ರೆಸ್, ಆರ್.ಜೆ.ಡಿ, ಜೆಡಿಯು, ಎನ್.ಸಿ.ಪಿ, ಎಡಪಕ್ಷಗಳು ಸೇರಿದಂತೆ ಇತರೆ ಸಣ್ಣ ಪುಟ್ಟ ಪಕ್ಷಗಳ ಬೆಂಬಲವಿದೆ. ಉಪರಾಷ್ಟ್ರಪತಿ ಆಯ್ಕೆಗೆ ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರು ಮತದಾನ ಮಾಡಲಿದ್ದಾರೆ. ಮತದಾನ ಮಾಡಲು ಸಂಸದರಿಗೆ ವಿಶೇಷ ಪೆನ್ ಗಳ್ನು ನೀಡಲಾಗಿದೆ.

ರಾಹುಲ್ ಕಾರಿನ ಮೇಲೆ ಕಲ್ಲಿನಿಂದ ದಾಳಿ, ಕಪ್ಪು ಬಾವುಟ ಪ್ರದರ್ಶನ

ಪ್ರಧಾನಮಂತ್ರಿ ನರೇಂದ್ರ ಮೋದಿ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, ಇನ್ನೂ ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡದ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್, ಕೃಷಿ ಸಚಿವ ರಾಧಾ ಮೋಹನ್ ಸಿಂಗ್, ಸಚಿವ ಕಿರಣ್ ರಿಜಿಜು, ರೈಲ್ವೇ ಸಚಿವ ಸುರೇಶ್ ಪ್ರಭು, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈಗಾಗಲೇ ಮತ ಚಲಾಯಿಸಿದ ಪ್ರಮುಖರು.

Contact for any Electrical Works across Bengaluru

Loading...
error: Content is protected !!