ಕೊನೆಗೂ ಮಾರಾಟವಾಯಿತು ವಿಜಯ್ ಮಲ್ಯಾ ವಿಲ್ಲಾ: ಖರೀದಿಸಿದ್ದು ನಟ – News Mirchi

ಕೊನೆಗೂ ಮಾರಾಟವಾಯಿತು ವಿಜಯ್ ಮಲ್ಯಾ ವಿಲ್ಲಾ: ಖರೀದಿಸಿದ್ದು ನಟ

ಮುಂಬೈ: ಮದ್ಯದ ದೊರೆ ವಿಜಯ್ ಮಲ್ಯಾಗೆ ಸೇರಿದ ಗೋವಾದಲ್ಲಿನ ಐಷಾರಾಮಿ ಕಿಂಗ್ ಫಿಷರ್ ವಿಲ್ಲಾ ಕೊನೆಗೂ ಮಾರಾಟವಾಗಿದೆ. ಚಿತ್ರ ನಟ, ಉದ್ಯಮಿ ಸಚಿನ್ ಜೋಷಿ ಈ ವಿಲ್ಲಾ ಖರೀದಿಸಿದ್ದಾರೆ. ಈ ಐಷಾರಾಮಿ ಮನೆಯನ್ನು ಮಾರಲು ಬ್ಯಾಂಕು ಅಧಿಕಾರಿಗಳು ಹಲವು ಬಾರಿ ಹರಾಜು ನಡೆಸಿದ್ದರೂ, ನಿಗಧಿಪಡಿಸಿದ್ದ ಬೆಲೆ ಕೊಟ್ಟು ಖರೀದಿಸಲು ಯಾರೂ ಮುಂದೆ ಬಂದಿರಲಿಲ್ಲ. ಇದೀಗ ಮಾತುಕತೆ ಮೂಲಕ ವ್ಯಾಪಾರ ಕುದುರಿಸಿದ್ದಾರೆ. ಕೊನೆಯ ಬಾರಿ ನಿಗಧಿತ ಬೆಲೆ ರೂ. 73 ಕೋಟಿಗಿಂತ ಹೆಚ್ಚು ನೀಡಲು ಸಚಿನ್ ಜೋಷಿ ಅಂಗೀಕರಿಸಿದ್ದಾರೆ. ಕಿಂಗ್ ಫಿಷರ್ ವಿಲ್ಲಾವನ್ನು ಮಾರಾಟ ಮಾಡಿದ ವಿಷಯವನ್ನು ಎಸ್.ಬಿ.ಐ ಅಧ್ಯಕ್ಷೆ ಅರುಂಧತಿ ಭಟ್ಟಾಚಾರ್ಯ ಖಚಿತಪಡಿಸಿದ್ದಾರೆ.

ಬ್ಯಾಂಕುಗಳಿಂದ ಸಾವಿರಾರು ಕೋಟಿ ಸಾಲ ಮಾಡಿದ್ದ ವಿಜಯ್ ಮಲ್ಯಾ, ಅದನ್ನು ಮರುಪಾವತಿ ಮಾಡದೆ ವಿದೇಶಕ್ಕೆ ಪರಾರಿಯಾಗಿದ್ದರು. ಸಾಲ ವಸೂಲಿ ಮಾಡಲು ಬ್ಯಾಂಕ್ ಅಧಿಕಾರಿಗಳು ಗೋವಾದಲ್ಲಿನ ಮಲ್ಯಾ ವಿಲ್ಲಾವನ್ನು ಹರಾಜಿಗೆ ಇಟ್ಟಿದ್ದರು. ಈ ಐಷಾರಾಮಿ ವಿಲ್ಲಾದಲ್ಲಿ ಎಲ್ಲಾ ರೀತಿಯ ಸೌಲಭ್ಯಗಳಿಗೆ. ಈ ವಿಲ್ಲಾವನ್ನು ಕೊಳ್ಳಲು ಹಲವರು ಆಸಕ್ತಿ ಹೊಂದಿದ್ದರೂ ಬ್ಯಾಂಕುಗಳು ನಿಗಧಿಪಡಿಸಿದ್ದ ಬೆಲೆಯನ್ನು ಪಾವತಿಸಲು ಯಾರೂ ಸಿದ್ಧರಿರಲಿಲ್ಲ. ಹೀಗಾಗಿ ಮೊದಲು ನಿಗಧಿಗೊಳಿಸಿದ್ದ ಬೆಲೆ ರೂ. 85 ಕೋಟಿಗಳನ್ನು 81ಕ್ಕೆ ಇಳಿಸಲಾಗಿತ್ತು. ಆದರೂ ಪ್ರಯೋಜನವಿಲ್ಲದೆ ಇದ್ದಾಗ ಕೊನೆಗೆ 73 ಕೋಟಿಗೆ ಇಳಿಸಲಾಯಿತು.

Loading...