ನಾಯಿ ರಕ್ಷಿಸಲು ಕಾಂಗರೂಗೆ ಪಂಚ್ ಕೊಟ್ಟ ವೀಡಿಯೋ ವೈರಲ್

ತನ್ನ ಸಾಕು ನಾಯಿ ರಕ್ಷಿಸಿಕೊಳ್ಳಲು ವ್ಯಕ್ತಿಯೊಬ್ಬ ಕಾಂಗರೂಗೆ ಪಂಚ್ ನೀಡಿದ ವೀಡಿಯೋ ವೈರಲ್ ಆಗಿ ಹರಿದಾಡುತ್ತಿದೆ. ಇದರ ಹಿಂದಿರುವ ಕಥೆಯನ್ನೊಮ್ಮೆ ನೋಡೋಣ ಬನ್ನಿ…

ಗ್ರೇಗ್ ಟಾಂಕಿನ್ಸ್ ಮತ್ತಾತನ ಸ್ನೇಗಿತರು ಹಂದಿ ಬೇಟೆಗೆ ಅರಣ್ಯಕ್ಕೆ ವಾಹನದಲ್ಲಿ ತೆರಳಿದ್ದರು. ಅವರೊಂದಿಗೆ ಕ್ಯಾನ್ಸರ್ ನಿಂದ ಬಳಲುತ್ತಿದ್ದ 19 ವರ್ಷದ ಕೇಲಮ್ ಬಾರ್ವಿಕ್ ಎಂಬಾತನೂ ಹೊರಟಿದ್ದ. ಅವರೊಂದಿಗೆ ಒಂದಷ್ಟು ನಾಯಿಗಳೂ ಇದ್ದವು.

ಭೇಟೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಅವರ ನಾಯಿಗಳಲ್ಲಿ ಒಂದು ನಾಯಿ ವಾಸನೆ ಹಿಡಿಯುತ್ತಾ ಹೋಗಿ ಕಾಂಗರೂ ಹಿಡಿತಕ್ಕೆ ಸಿಲುಕಿತು. ಕೂಡಲೇ ವಾಹನ ಇಳಿದು ನಾಯಿಯ ರಕ್ಷಣೆಗೆ ಓಡಿದ ಟಾಂಕಿನ್ಸ್, ಮೊದಲು ಕಾಂಗರೂ ಗಮನ ಬೇರೆಡೆ ಸೆಳೆದು ನಾಯಿಯನ್ನು ಬಿಡಯವಂತೆ ಮಾಡಿದ. ಅಷ್ಟಕ್ಕೆ ಸುಮ್ಮನೆ ವಾಪಸಾಗದ ಟಾಂಕಿನ್ಸ್ ಕಾಂಗರೂಗೆ ಮುಖಕ್ಕೆ ಹೊಡೆದ. ನಂತರ ಕಾಂಗರೂ ಅಲ್ಲಿಂದ ಕಾಲ್ಕಿತ್ತಿತು. ಈ ದೃಶ್ಯ ನೋಡಿದರೆ ನಗು ಬಾರದೇ ಇರದು.

ಈ ವೀಡಿಯೋ ಬಿಡುಗಡೆಯಾಗಿ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದ್ದರೆ, ಅದನ್ನು ನೋಡಲು ಮಾತ್ರ ಬಾರ್ವಿಕ್ ಎಂಬ ಸ್ನೇಹಿತ ಅವರೊಂದಿಗಿಲ್ಲ. ಈ ವೀಡಿಯೋ ಹರಿದಾಡುವ ಕೆಲ ದಿನಗಳ ಹಿಂದಷ್ಟೇ ಸಾವನ್ನಪ್ಪಿದ್ದ.

ಈ ವೀಡಿಯೋ ನೋಡಿ…