ಪಾಕ್ ವಿರುದ್ಧ ಸೋಲಿಗೆ ಕೊಹ್ಲಿ ಅಹಂ ಕಾರಣ? – News Mirchi

ಪಾಕ್ ವಿರುದ್ಧ ಸೋಲಿಗೆ ಕೊಹ್ಲಿ ಅಹಂ ಕಾರಣ?

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಮಾಜಿ ಕೋಚ್ ಅನಿಲ್ ಕುಂಬ್ಳೆ ನಡುವೆ ಎಷ್ಟು ದಿನಗಳಿಂದ ಮತ್ತು ಯಾಕೆ ಭಿನ್ನಾಭಿಪ್ರಾಯಗಳು ಸೃಷ್ಟಿಯಾದವು ಎಂಬ ಖಚಿತ ಮಾಹಿತಿ ಯಾರ ಬಳಿಯೂ ಇಲ್ಲವಾದರೂ, ಈಗೀಗ ಇವರ ನಡುವಿನ ಜಗಳಗಳು ಒಂದೊಂದೇ ಬಹಿರಂಗವಾಗುತ್ತಿವೆ.

ಕೊಹ್ಲಿ ಮತ್ತು ಕುಂಬ್ಳೆ ಪರಸ್ಪರ ಮಾತನಾಡಿಕೊಂಡು ಸುಮಾರು 6 ತಿಂಗಳುಗಳೇ ಕಳೆದಿವೆ ಎಂಬ ಮಾಹಿತಿ ಬುಧವಾರ ಬಹಿರಂಗವಾಗಿದೆ. ಇದೀಗ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ನಲ್ಲಿ ಸಾಂಪ್ರದಾಯಿಕ ಎದುರಾಳಿಯ ವಿರುದ್ಧ ಭಾರತ ತಂಡ ಸೋಲಲು ನಾಯಕ ವಿರಾಟ ಕೊಹ್ಲಿ ಅಹಂ ಕಾರಣ ಎಂಬ ಮಾತುಗಳು ಬಲವಾಗಿ ಕೇಳಿಬರುತ್ತಿವೆ.

ಚಾಂಪಿಯನ್ಸ್ ಟ್ರೋಫಿ ಫೈನಲ್ ನಲ್ಲಿ ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ದುಕೊಂಡಿತ್ತು. ಬ್ಯಾಟ್ಸ್ ಮೆನ್ ಗೆ ಅನುಕೂಲಕರವಾಗಿರುವ ಫ್ಲ್ಯಾಟ್ ವಿಕೆಟ್ ಮೇಲೆ ಯಾರೇ ಆಗಲೀ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳುತ್ತಾರೆ. ಇದನ್ನೇ ಆಸ್ಟ್ರೇಲಿಯಾ ಮಾಜಿ ಆಟಗಾರ ಗಿಲ್ ಕ್ರಿಸ್ಟ್ ಹೇಳಿದ್ದು. ಭಾರತದ ಹಿರಿಯ ಆಟಗಾರರೂ ಅದನ್ನೇ ಹೇಳಿದರು. ಕೊನೆಗೆ ಪಾಕ್ ಹಿರಿಯ ಆಟಗಾರರು ಕೂಡಾ ತಾವು ಗೆದ್ದರೆ ಮೊದಲು ಭಾರತಕ್ಕೆ ಬ್ಯಾಟಿಂಗ್ ಗೆ ಅವಕಾಶ ನೀಡಬಾರದು ಎಂದು ಸರ್ಫರಾಜ್ ಗೆ ಸೂಚಿಸಿದ್ದರು. ಕೊಹ್ಲಿ ಬರುವ ಮುನ್ನವೂ ಟಾಸ್ ಗೆದ್ದರೆ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳಬೇಕು ಎಂದು ಕುಂಬ್ಳೆ ಹೇಳಿದ್ದರೆಂದು ಬಿಸಿಸಿಐ ಮೂಲಗಳು ಹೇಳಿದ್ದಾಗಿ ಸುದ್ದಿಗಳು ಬರುತ್ತಿವೆ.

ಆದರೆ ಮೊದಲೇ ಕುಂಬ್ಳೆ ಎಂದರೆ ಮೂಗು ಮುರಿಯುತ್ತಿದ್ದ ವಿರಾಟ್ ಕೊಹ್ಲಿ ಅಹಂಕಾರದಿಂದ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು ಎನ್ನಲಾಗುತ್ತಿದೆ. ನಂತರ ನಡೆದಿದ್ದೆಲ್ಲಾ ಇಡೀ ದೇಶಕ್ಕೆ ಗೊತ್ತಿರುವುದೇ. ಇದನ್ನೆಲ್ಲಾ ನೋಡುತ್ತಿದ್ದರೆ ಫೈನಲ್ ನಲ್ಲಿ ಪಾಕ್ ವಿರುದ್ಧ ಭಾರತ ತಂಡ ಸೋಲಲು ಕೇವಲ ವಿರಾಟ್ ಕೊಹ್ಲಿ ಅಹಂ ಕಾರಣ ಎಂದು ಹಲವರು ತೀರ್ಮಾನಕ್ಕೆ ಬಂದಿದ್ದಾರೆ. [ಓಟ್ ಮಾಡಿ: ಚಾಂಪಿಯನ್ಸ್ ಟ್ರೋಫಿ ಸೋಲಿಗೆ ವಿರಾಟ್ ಕೊಹ್ಲಿ ಕಾರಣ ಅಂತ ನಂಬ್ತೀರಾ?]

Loading...