ಆ ಅಧಿಕಾರಿಗೆ ಸೆಹವಾಗ್ ಪ್ರಶಂಸೆ – News Mirchi

ಆ ಅಧಿಕಾರಿಗೆ ಸೆಹವಾಗ್ ಪ್ರಶಂಸೆ

ನವದೆಹಲಿ: ಕಾಶ್ಮೀರದಲ್ಲಿ ಯೋಧರ ವಿರುದ್ಧ ಕಲ್ಲೆಸೆತಕ್ಕೆ ಮುಂದಾದವರಲ್ಲಿ ಒಬ್ಬನನ್ನು ಸೇನಾ ಜೀಪಿಗೆ ಕಟ್ಟಿ ರಕ್ಷಣಾ ಕವಚವನ್ನಾಗಿ ಬಳಸಿಕೊಂಡು ಸಮಯ ಸ್ಪೂರ್ತಿ ಮೆರೆದ ಮೇಜರ್ ಗೊಗೋಯ್ ಅವರಿಗೆ ಪ್ರಸಿದ್ಧ ಕ್ರಿಕೆಟಿಗ ವೀರೇಂದ್ರ ಸೆಹವಾಗ್ ಅವರು ವಿಶೇಷ ಸಂದೇಶ ಕಳುಹಿಸಿದ್ದಾರೆ. ಟ್ವಿಟರ್ ಮೂಲಕ ನಿತಿನ್ ಗೊಗೋಯ್ ಅವರಿಗೆ ಸೆಹವಾಗ್ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಕಮ್ಯಾಂಡೇಷನ್ ಕಾರ್ಡ್ ಮೆಡಲ್ ಪಡೆದ ಮೇಜರ್ ಗೊಗೋಯ್ ಗೆ ಅಭಿನಂದನೆಗಳು. ನಮ್ಮ ಸೈನಿಕರನ್ನು ರಕ್ಷಿಸಲು ಉತ್ತಮ ಕೆಲಸ ಮಾಡಿದ್ದಾರೆ ಎಂದು ಸೆಹವಾಗ್ ಟ್ವೀಟ್ ಮಾಡಿದ್ದಾರೆ.

ಕಾಶ್ಮೀರದಲ್ಲಿ ಕಲ್ಲೆಸೆತೆಕ್ಕೆ ಮುಂದಾಗುತ್ತಿದ್ದ ಪ್ರತಿಭಟನಾಕಾರರಿಂದ ಬಚಾವಾಗಲು ಮತ್ತು ಪರಿಸ್ಥಿತಿಯನ್ನು ನಿಯಂತ್ರಿಸುವ ಜೊತೆಗೆ ತಮ್ಮೊಂದಿಗಿದ್ದ ಇತರ ಯೋಧರನ್ನು ರಕ್ಷಿಸುವ ನಿಟ್ಟಿನಲ್ಲಿ ಗೊಗೋಯ್ ಪ್ರತಿಭಟನಾಕಾರನೊಬ್ಬನನ್ನು ಜೀಪು ಮುಂಭಾಗಕ್ಕೆ ಕಟ್ಟಿ ಸಾಗಿದ್ದರು. ಮೇಜರ್ ಗೊಗೋಯ್ ಅವರ ನಡೆಯನ್ನು ಪ್ರಶಂಸಿಸುತ್ತಾ ಆರ್ಮಿ ಛೀಫ್ ಬಿಪಿನ್ ರಾವತ್ ಗೊಗೋಯ್ ಗೆ ಪ್ರಶಂಸಾ ಪತ್ರವನ್ನು ನೀಡಿದರು.

 

Contact for any Electrical Works across Bengaluru

Loading...
error: Content is protected !!