ಮೋದಿಯವರದ್ದು ಉತ್ತಮ ಆಲೋಚನೆ : ವಿಶ್ವನಾಥನ್ ಆನಂದ್ – News Mirchi

ಮೋದಿಯವರದ್ದು ಉತ್ತಮ ಆಲೋಚನೆ : ವಿಶ್ವನಾಥನ್ ಆನಂದ್

ಭಾರತ ಪ್ರವಾಸ ಕೈಗೊಂಡಿರುವ ಭೂತಾನ್ ದೊರೆ ಜಿಗ್ಮೇ ನ್ಯಾಂಗೆಲ್ ವಾಂಗ್ ಚುಕ್ ದಂಪತಿಗಳು ಬುಧವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಭೂತಾನ್ ಯುವರಾಜ ಜಿಗ್ಮೇ ನ್ಯಾಂಗೆಲ್ ವಾಂಗ್ ಚುಕ್ ಗೆ ಮೋದಿಯವರು ಒಂದು ಉಡುಗೊರೆ ಕೊಟ್ಟರು.

ಇತ್ತೀಚೆಗೆ ಭಾರತದಲ್ಲಿ ನಡೆದ ಫಿಫಾ ಅಂಡರ್-17 ವಿಶ್ವಕಪ್ ನಲ್ಲಿ ಬಳಸಿದ ಅಧಿಕೃತ ಫುಟ್ ಬಾಲ್, ಒಂದು ಚೆಸ್ ಸೆಟ್ ಅನ್ನು ಪ್ರಧಾನಿ ಉಡುಗೊರೆಯಾಗಿ ನೀಡಿದರು. ಮೋದಿಯವರು ನೀಡಿದ ಉಡುಗೊರೆ ಕುರಿತು ಪ್ರಮುಖ ಗ್ರಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ ಸಂತಸ ವ್ಯಕ್ತಪಡಿಸಿದ್ದಾರೆ. ಭೂತಾನ್ ಯುವರಾಜನಿಗೆ ಚೆಸ್ ಬೋರ್ಡ್ ಉಡುಗೊರೆಯಾಗಿ ನೀಡಬೇಕೆಂದುಕೊಂಡಿದ್ದು ನಿಜವಾಗಿಯೂ ಉತ್ತಮ ಆಲೋಚನೆ ಎಂದು ಮೋದಿ ನಡೆಯನ್ನು ಕೊಂಡಾಡಿದರು. ‘ಚೆಸ್ ಬೋರ್ಡ್ ಉಡುಗೊರೆಯಾಗಿ ನೀಡುವುದು ನಿಜವಾಗಿಯೂ ಒಂದು ಉತ್ತಮ ಆಲೋಚನೆ, ಆ ಮಗುವಿನ ಆಲೋಚನೆಗಳಿಗೆ ಸೂಕ್ತ ವಸ್ತು ಅದು. ಥ್ಯಾಂಕ್ಯೂ’ ಎಂದು ಟ್ವೀಟ್ ಮಾಡಿದ್ದಾರೆ.

[ಇದನ್ನೂ ಓದಿ: ಕಮಲ್ ಮಾನಸಿಕ ಪರಿಸ್ಥಿತಿ ಸರಿಯಿಲ್ಲ, ಆಸ್ಪತ್ರೆಗೆ ದಾಖಲಿಸಿ]

ವಾಂಗ್ ಚುಕ್ ದಂಪತಿಗಳು ಮಂಗಳವಾರ ದೆಹಲಿಗೆ ಆಗಮಿಸಿದರು. ನಾಲ್ಕು ದಿನಗಳ ಕಾಲ ಭಾರತದಲ್ಲಿ ಅವರು ಪ್ರವಾಸ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ವಾಂಗ್ ಚುಕ್ ಮೋದಿಯವರೊಂದಿಗೆ ಭೇಟಿ ಮಾಡಿ ಉಭಯ ದೇಶಗಳ ನಡುವಿನ ಸಂಬಂಧಗಳು ಸೇರಿದಂತೆ ಇತರೆ ವಿಷಯಗಳ ಕುರಿತು ಚರ್ಚೆ ನಡೆಸಿದರು.

Get Latest updates on WhatsApp. Send ‘Add Me’ to 8550851559

Loading...