ಸೆಲ್ಫೀಗಾಗಿ 20 ಮೆಗಾ ಪಿಕ್ಸೆಲ್ ಕ್ಯಾಮೆರಾದೊಂದಿಗೆ ವಿ5

ಸ್ಮಾರ್ಟ್ ಫೋನ್ ಕಂಪನಿ ವಿವೋ ಇದೀಗ ಪರ್ಫೆಕ್ಟ್ ಸೆಲ್ಫೀಗಾಗಿ 20 ಮೆಗಾ ಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದ ‘ವಿವೋ ವಿ5′ ಸ್ಮಾರ್ಟ್ ಫೋನ್ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್ ಫೋನ್ ಬೆಲೆ ರೂ. 17,980. ತಂತ್ರಜ್ಞಾನ, ವಿನ್ಯಾಸ, ಒಟ್ಟಾರೆ ಉತ್ತಮ ಪರ್ಫಾರ್ಮೆನ್ಸ್ ನೊಂದಿಗೆ ಈ ಸ್ಮಾರ್ಟ್ ಫೋನ್ ಅನ್ನು ಮಾರುಕಟ್ಟೆಗೆ ತಂದಿದ್ದಾಗಿ ಕಂಪನಿ ಹೇಳಿದೆ.

ವಿವಿಧ ಬೆಳಕಿನ ಪರಿಸ್ಥಿತಿಗಳಿಗೆ ಅನುಗುಣವಾಗಿ ಮೂನ್ ಲೈಟ್ ಗ್ಲೋ ನೊಂದಿಗೆ 20 ಮೆಗಾ ಪಿಕ್ಸೆಲ್ ಮುಂಬದಿ ಕ್ಯಾಮೆರಾನೊಂದಿಗೆ ವಿ5 ವಿನ್ಯಾಸಗೊಳಿಸಿದ್ದಾಗಿ ವಿವೋ ಇಂಡಿಯಾ ಸಿಇಒ ಕೆಂಟ್ ಚೆಂಗ್ ಹೇಳಿದ್ದಾರೆ. ಇನ್ನು ಮುಂದಿನ ವರ್ಷದ ವೇಳೆಗೆ ಭಾರತದಲ್ಲಿ ಸ್ಮಾರ್ಟ್ ಫೋನ್ ಉತ್ಪಾದನಾ ಸಾಮರ್ಥ್ಯವನ್ನು ದ್ವಿಗುಣಗೊಳಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ವಿವೊ ಇಂಡಿಯಾ ಮಾರ್ಕೆಟಿಂಗ್ ಅಧಿಕಾರಿ ವಿವೇಕ್ ಜಾಂಗ್ ಹೇಳಿದ್ದಾರೆ.

ವಿ5 ಸ್ಮಾರ್ಟ್ ಫೋನ್ ವೈಶಿಷ್ಟ್ಯಗಳು

4ಜಿ ಎಲ್ಟಿಇ ನೆಟವರ್ಕ್
5.5 ಇಂಚಿನ ಡಿಸ್ ಪ್ಲೇ
ಆಕ್ಟಾ ಕೋರ್ 64 ಬಿಟ್
4 ಜಿಬಿ ರ್ಯಾಮ್
32 ಜಿಬಿ ಇಂಟರ್ನಲ್ ಸ್ಟೋರೇಜ್ (128 ವರೆಗೂ ವಿಸ್ತರಿಸಬಲ್ಲ ಸಾಮರ್ಥ್ಯ)
20 ಮೆಗಾ ಪಿಕ್ಸೆಲ್ ಫ್ರಂಟ್ ಕ್ಯಾಮೆರಾ
13 ಎಂ.ಪಿ ಹಿಂಬದಿ ಕ್ಯಾಮೆರಾ
3000 ಎಂಎಹೆಚ್ ಬ್ಯಾಟರಿ